ವಿಜಯಪುರ ಆಧ್ಯಾ ಟ್ರಸ್ಟ ಸಂಘ ಪ್ರಾರಂಭ

Karnataka 1 News
ವಿಜಯಪುರ ಆಧ್ಯಾ ಟ್ರಸ್ಟ ಸಂಘ ಪ್ರಾರಂಭ

ವಿಜಯಪುರ: ಆಧ್ಯಾ ಟ್ರಸ್ಟ ಎಂಬ ಸಂಘಪ್ರಾರಂಭಿಸಲಾಯಿತು. ಸಂಘದ ಅಧ್ಯಕ್ಷರಾದ ಸೌ.ಪಲ್ಲವಿ ಶಂಕರರಾವ್ ಜೋಶಿ (ಅಜರೇಕರ) ಅವರು ಮಾತನಾಡಿ ಮಹಿಳೆ ಅಂದರೆ ಶಕ್ತಿ, ಸತ್ಯಯುಗದಿಂದ ಪ್ರಸ್ತುತ ಕಲಿಯುವವರೆಗೂ ಮಹಿಳೆಯರು ಸಮಾಜದ ಏಳ್ಗೆಯಲ್ಲಿ ತಮ್ಮ ಸಹಭಾಗಿತ್ವ ತೋರಿಸುತ್ತಾ ಬಂದಿದ್ದಾರೆ. ಸಮಾಜದ ಕಟ್ಟ ಕಡೆಯ ಮಹಿಳೆ ಕೂಡಾ ಧೈರ್ಯದಿಂದ ತಮ್ಮ ಜೀವನ ಬದುಕಲು ಬೇಕಾಗಿರುವ ಬೆಂಬಲ ನೀಡುವ ಧ್ಯೇಯದೊಂದಿಗೆ ಆಧ್ಯಾ ಟ್ರಸ್ಟ ಪ್ರಾರಂಭ ಮಾಡಿದ್ದೇವೆ ಎಂದು ಹೇಳಿದರು. ಜಯಶ್ರೀ ಕೊಡೇಕಲ್ , ಸವಿತಾ ಗಲಗಲಿ, ಜಯಶ್ರೀ ಕುಲಕರ್ಣಿ ಅವರ ಸಂಘಟನಾ ಚಾತುರ್ಯ ಮತ್ತು ಮಹಿಳೆಯರ ಬಗ್ಗೆ ಇರುವ ಕಾಳಜಿ ನೋಡಿ ಕೆಲವೋಮ್ಮೆ ಆಶ್ಚರ್ಯವಾಗುತ್ತದೆ. ಮನೆಯ ಕೆಲಸದ ಜೊತೆ ಸಮಾಜಮುಖಿ ಕೆಲಸದಲ್ಲಿಯೂ ಸಹ ಮುಂಚೂಣಿಯಲ್ಲಿರುವುದು ಶ್ಲಾಘನೀಯ. ಅನಿವಾರ್ಯ ಕಾರಣಗಳಿಂದ ಈ ಕಾರ್ಯಕ್ರಮದಲ್ಲಿ ಗೈರಾಗಿದ್ದ ಖ್ಯಾತ ವೈದರಾದ ಡಾ. ವಿದ್ಯಾ ತೊಬ್ಬಿ ಅವರು ನನಗೆ ಕರೆ ಮಾಡಿ ಆದ್ಯಾ ಟ್ರಸ್ಟ ಜೊತೆ ಕೈ ಜೋಡಿಸಿ ಮಹಿಳೆಯರಲ್ಲಿ ಆರೋಗ್ಯ ಜಾಗೃತಿ ಮಾಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಸೌ ಶೈಲಜಾ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿ ಪಲ್ಲವಿ ಜೋಶಿ (ಮಾತಾಜಿ) ಅವರು ಮಹಿಳೆಯರ ಉನ್ನತಿಯ ಧ್ಯೇಯದೊಂದಿಗೆ ಕೆಲಸ ಪ್ರಾರಂಭಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯ. ಮಹಿಳೆಯರು ಕೂಡಾ ಸಂಘಟನೆ ಮಾಡಬಹುದು ಯಾವುದೇ ಭೇದ ಭಾವ ಇಲ್ಲದೆ ಒಂದಾಗಿ ಸಮಾಜದ ಏಳಿಗೆಗಾಗಿ ಶ್ರಮಿಸಬಹುದು ಎಂದು ವಿವರಿಸಿದರು. ಮಹಾನಗರ ಪಾಲಿಕೆ ಸದಸ್ಯರಾದ ಸೌ ಸ್ವಪ್ನಾ ಕಣಮುಚನಾಳ ಮಾತನಾಡಿ, ಸ್ತ್ರೀ ಶಕ್ತಿ – ಸ್ತ್ರೀ ಸಬಲೀಕರಣ ಎಂದು ಭಾಷಣ ಮಾಡುವ ಸಾಕಷ್ಟು ಜನರನ್ನು ನೋಡಿದ್ದೇವೆ, ಆದರೆ ಮಾತಾಜಿ ಅವರು ಭಾಷಣ ಮಾಡದೆ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗಾಗಿ ಪ್ರಾರಂಭಿಸಿದ ಆದ್ಯಾ ಟ್ರಸ್ಟಗೆ ಸದಾ ನನ್ನ ಬೆಂಬಲ ಇರುತ್ತದೆ ಎಂದರು. ಸೀಮಾ ದೇಸಾಯಿ ಹಾಗೂ ಪೂಜಾ ಪಾಟೀಲ ಕಾರ್ಯಕ್ರಮದ ನಿರೂಪಣೆ ಮಾಡಿದರು.ಈ ಸಂದರ್ಭದಲ್ಲಿ ಮಂಗಲಾ ಪಾಟೀಲ್ ಯತ್ನಾಳ್, ಡಾ. ಜಯಶ್ರೀ ಮುಂಡೆವಾಡಿ, ಸವಿತಾ ಜಾಲವಾದಿ, ನಿವೇದಿತಾ ಕುಲಕರ್ಣಿ, ರಾಧಿಕಾ ಗಲಗಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";