![](https://karnataka1news.com/wp-content/uploads/2023/05/IMG_20230530_104418.jpg)
ವಿಜಯಪುರ: ಕಳ್ಳರು ತಮ್ಮ ಕೈಚಳಕ ತೋರಿಸಿ ಸರಣಿ ಶೋರೂಮ್ನಲ್ಲಿ ಲಕ್ಷಾಂತರ ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರದ ರಿಂಗ್ ರೋಡ್ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಹ್ಯುಂಡೈ, ಕಿಯಾ, ಟೋಯೋಟಾ, ಆರ್ ಎನ್ ಎಸ್ ಮೋಟರ್ಸ್ ಶೋರೂಮ್ನಲ್ಲಿ ಖದೀಮರ ಕೈಚಳಕ ತೋರಿಸಿದ್ದಾರೆ. ನಿನ್ನೆ ತಡರಾತ್ರಿ ಶೋ ರೂಮ್ನಲ್ಲಿರುವ ಲಾಕರ್ ಒಡೆದು ಕಳ್ಳತನ ಮಾಡಿದ್ದಾರೆ. ಅಲ್ಲದೇ, ಪ್ರತಿ ಶೋರೂಮ್ನಲ್ಲಿ ಕೈಗೆ ಸಿಕ್ಕಷ್ಟು ಹಣ ದೋಚಿ ಪರಾರಿಯಾಗಿದ್ದಾರೆ. ಇನ್ನೂ ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.