ವಿಜಯಪುರ: ನಾನು ಮುಖ್ಯಮಂತ್ರಿಯಾದ್ರೆ ಹತ್ತು ಕೆಜಿ ಅಕ್ಕಿ ಕೊಡ್ತೀನಿ ಎಂದು ಹಿಂಗ್ ಹಿಂಗ್ ಹೊರಳಾಡ್ತಾನೆ ಎಂದು ಸಚಿವ ಉಮೇಶ ಕತ್ತಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಟೈಲ್ ಮಾಡಿ ತೋರಿಸಿ ವ್ಯಂಗ್ಯ ಮಾಡಿದರು. ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಹತ್ತು ಕೆಜಿ ಅಕ್ಕಿ ಕೊಟ್ಟಿಲ್ಲ. ನಾವು ಮಾತ್ರ ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದೇವೆ.
ಜೊತೆಗೆ ಜೋಳ,ರಾಗಿ ಕೊಡ್ತಿದ್ದೇವೆ ಎಂದರು. ಇನ್ನೂ
ಸಿದ್ದರಾಮಯ್ಯ ರಾಜಕೀಯವಾಗಿ ತನಗೆ ಏನು ಬೇಕು ಅದನ್ನ ಹೇಳುತ್ತಿದ್ದಾನೆ. ಅದಕ್ಕಾಗಿ ಜನತೆ ಅದನ್ನು ನಂಬುಬಾರದು ಎಂದು ಕಿಡಿಕಾರಿದರು. ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಅಲ್ಲದೇ, ಪೋಕ್ಸೊ ಕಾಯ್ದೆಯಡಿ ಜಡ್ಜ್ ಮಕ್ಕಳನ್ನು ಕರೆದು ವಿಚಾರಣೆ ಮಾಡ್ತಿದ್ದಾರೆ. ಮುರುಘಾ ಶ್ರೀ ಬಂಧನ ಮಾಡೋದು ಬಿಡೋದು ಕೋರ್ಟ್ ತೀರ್ಪು ಪ್ರಕಾರ ನಡೆದುಕೊಳ್ತಾರೆ. ಇನ್ನು ಹೊರ ರಾಜ್ಯದಿಂದ ತನಿಖೆ ನಡೆಯಿಸಿ ಎಂದು ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಪತ್ರ ಬರೆದ ವಿಚಾರಕ್ಕೆ ಉತ್ತರ ನೀಡಿದ ಅವರು, ಯಾರು ತನಿಖೆ ನಡೆಸಿದ್ರೆ ಏನು ತೊಂದ್ರೆ ಆಗಲ್ಲ. ಪ್ರಾಥಮಿಕವಾಗಿ ರಾಜ್ಯದ ಪೊಲೀಸರು ತನಿಖೆ ಮಾಡ್ಬೇಕು. ಜಡ್ಜ್ ಗಳು ಅದರ ಬಗ್ಗೆ ವಿಚಾರಣೆ ಮಾಡ್ಬೇಕು. ತೀರ್ಮಾನ ಮಾಡಿದ ಮೇಲೆ ಕ್ರಮ ಕೈಗೊಳ್ತಾರೆ ಎಂದರು.