ವಿಜಯಪುರ: ವಿಜಯಪುರದಲ್ಲಿ ಸಾವರ್ಕರ್ ವಿವಾದ ತಾರಕ್ಕೇರಿದೆ.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋಗಳನ್ನು ಕಿಡಗೇಡಿಗಳು ಅಂಟಿಸಿದ್ದಾರೆ. ಇನ್ನು ಕಾಂಗ್ರೆಸ್ ಕಚೇರಿಯನ್ನು ಸಂಪೂರ್ಣ ಸಾವರ್ಕರ್ ಮಯ ಮಾಡಿ ಫೋಟೋ ಅಂಟಿಸಿದ್ದಾರೆ. ತಡರಾತ್ರಿ ಹತ್ತಾರು ಫೋಟೋ ಅಂಟಿಸಿ ಪರಾರಿಯಾಗಿದ್ದಾರೆ. ಕಾಂಗ್ರೆಸ್ ಕಚೇರಿಯ ಕಟ್ಟಡ ಹಾಗೂ ಬಾಗಿಲಿಗೆ, ಬೋರ್ಡ್ ಗೆ ಸಾವರ್ಕರ್ ಫೋಟೋ ಅಂಟಿಸಿದ್ದಾರೆ.