ವಿಜಯಪುರ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹುಲಿಯೂ ಅಲ್ಲ. ಹೆಬ್ಬುಲಿಯೂ ಅಲ್ಲ ಎಂದು
ಮಹಾನಗರ ಪಾಲಿಕೆಯ ಬಿಜೆಪಿ ಬಂಡಾಯ ಅಭ್ಯರ್ಥಿ ರವಿ ಬಗಲಿ ಆರೋಪಿಸಿದರು.
ವಿಜಯಪುರ ನಗರದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಯತ್ನಾಳ ಪಾಲಿಕೆ ಟಿಕೆಟ್ ಕೊಡಿಸಿದ ಪೈಕಿ ಗೆದ್ದವರು ಕೇವಲ 9 ಸ್ಥಾನ ಮಾತ್ರ. ಇದು ಯತ್ನಾಳ ರ ಯೋಗ್ಯತೆ. ಕಾರಣ ಕೇಳಿದರೆ ಯೋಗ್ಯ ಅಭ್ಯರ್ಥಿ ಸಿಕ್ಕಿಲ್ಲ ಎನ್ನುತ್ತಾರೆ.
ಇನ್ನೂ ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ ಕೂಚಬಾಳ್ ಅಸಮರ್ಥ ನಾಯಕ. ಅವರೊಬ್ಬ ಸಿಂಗಾರ ಗೊಂಬಿ. ಕೂಡಲೇ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಬದಲಿಸಬೇಕು. ಪಕ್ಷಕ್ಕಾಗಿ ಪ್ರಾಮಾಣಿಕತೆ ತೋರದ ನೀವು ಆ ಸ್ಥಾನದಲ್ಲಿ ಮುಂದುರಿಯಲು ಅರ್ಹರಲ್ಲ ಎಂದರು.