ವಿಜಯಪುರ: ಗೋಳಗುಮ್ಮಟ್ ವೀಕ್ಷಣೆಗೆ ಹೋಗಿದ್ದ ವೃದ್ಧನೋರ್ವ ಗೋಳಗುಮ್ಮಟ್ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ನಗರದ ಗೋಳಗುಮ್ಮಟ್ ಆವರಣದಲ್ಲಿ ನಡೆದಿದೆ.
55 ವರ್ಷದ ವೃದ್ಧ ಸಲೀಂ ತಿಕೋಟ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನೂ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.