ವಿಜಯಪುರ: ಬಿಜೆಪಿ ಪಕ್ಷದಿಂದ ಮುಸ್ಲಿಂರ ಗಡ್ಡ, ಊಟ, ಟೋಪಿಗೆ ತೊಂದರೆ ಇದೆ ಎಂದು ವಿಜಯಪುರದಲ್ಲಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ ಓವೈಸಿ ಹೊಸ ಬಾಂಬ್ ಹಾಕಿದರು.
ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಬ್ ಕಾ ವಿಕಾಸ, ಸಬ್ ಕಾ ಸಾತ್ ಬರೀ ಬಿಜೆಪಿ ಮಾತಿನಲ್ಲೇ ಇದೆ. ಬಿಜೆಪಿ ಮುಸ್ಲಿಂರ ವಿರುದ್ಧ ಇದೆ ಎಂದು ಕಿಡಿಕಾರಿದರು. ಬಿಜೆಪಿ ಹಲಾಲ್ ಕಟ್ ಮಾಡಿ ತಮ್ನ ಕಮಿಷನ್ ಮಾಡಿಕೊಳ್ಳುತ್ತಿದೆ.
ಹಲಾಲ್ ವಿಚಾರದಲ್ಲಿ ಬಿಜೆಪಿ ಹಲಾಲ್ ಕಮಿಷನ್ ಮಾಡುತ್ತಿದೆ. ನಮ್ಮ ಹಲಾಲ್ ಮಾಂಸ ಮಾತ್ರ ಬಿಜೆಪಿಗೆ ಕಟ್ಟು ತರಹ ನೋಡ್ತಾರೆ. ಬಿಜೆಪಿ ಕಮಿಷನ್ ಬಗ್ಗೆ ವಿಡಿಯೋಗಳಿವೆ ಎಂದು ಓವೈಸಿ ಆರೋಪಿದರು.
ವಿಜಯಪುರ ನಗರ ಯತ್ನಾಳ ವಿರುದ್ಧ ಓವೈಸಿ ವಾಗ್ದಾಳಿ ಮಾಡಿದರು. ನಾವು ಪಾಕಿಸ್ತಾನದ ಹೆಸರು ಕೂಡ ಹೇಳುವುದಿಲ್ಲ. ಆದ್ರೇ, ಶಾಸಕ ಯತ್ನಾಳ ಪದೇ ಪದೇ ಪಾಕಿಸ್ತಾನ ಹೆಸರು ಉಲ್ಲೇಖ ಮಾಡ್ತಾರೆ. ಪಾಕಿಸ್ತಾನ ಮೇಲೆ ಅವರಿಗೆ ಪ್ರೀತಿ ಇದೆ. ಪಾಕಿಸ್ತಾನ ಮೇಲೆ ಪ್ರೀತಿ ಯಾಕೇ ಇದೇ ಅವರಿಗೆ ಗೊತ್ತು, ನನಗೆ ಗೊತ್ತು ಇಲ್ಲ. ಪ್ರಧಾನಿ ಮೋದಿ ಯತ್ನಾಳಗೆ ಹೇಳಿಕೊಟ್ಟಿರಬಹುದು. ಅದಕ್ಕಾಗಿ ಪದೇ ಪದೇ ಪಾಕಿಸ್ತಾನ ಹೆಸರು ಹೇಳ್ತಾರೆ ಎಂದು ವಾಗ್ದಾಳಿ ಮಾಡಿದರು.