ವಿಜಯಪುರ: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಮತ್ತು ಚುನಾವಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕೇಂದ್ರ ಸಶಸ್ತç ಮೀಸಲು ಪಡೆಯ ಯೋಧರು ಹಾಗೂ ಪೊಲೀಸರ ಆಕರ್ಷಕ ಪಥಸಂಚಲನ ವಿಜಯಪುರ ನಗರದಲ್ಲಿ ಜರುಗಿತು.
ಶುಕ್ರವಾರ ಸಂಜೆ ನಗರದ ಗಾಂಧಿವೃತ್ತದಲ್ಲಿ ಆರಂಭಗೊAಡ ಪಥಸಂಚಲನಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ವಿಜಯಪುರ ನಗರದ ಗಾಂಧಿ ವೃತ್ತದಿಂದ ಆರಂಭಗೊಂಡ ಪಥಸಂಚಲನ ನಗರದ ಮೀನಾಕ್ಷಿ ಚೌಕ, ನೌಬಾಗ, ಹವೇಲಿ ಗಲ್ಲಿ, ಸಕಾಫರೋಜಾ, ಅಥಣಿ ಗಲ್ಲಿ, ಮುರಾಣಕೇರಿ ಕ್ರಾಸ್, ಕೆ.ಸಿ.ಮಾರ್ಕೆಟ್ ಮಾರ್ಗವಾಗಿ ಸಂಚರಿಸಿದ ಪಥ ಸಂಚಲನವು ಮತದಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು.
ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಮಾತನಾಡಿ, ಜಿಲ್ಲೆಯ ಮತದಾರರು ಯಾವುದೇ ಆಮಿಷಕ್ಕೊಳಗಾಗದೇ, ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರತಿಯೊಬ್ಬ ಅರ್ಹ ಮತದಾರರು ನಿರ್ಭಿತಿಯಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಕ್ತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದು, ಯಾವುದೇ ಅರ್ಹ ಮತದಾರರ ಮತದಾನದಿಂದ ವಂಚಿತವಾಗದೇ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವಂತೆ ಅವರು ಕರೆ ನೀಡಿದ ಅವರು, ಜಿಲ್ಲೆಗೆ 5 ತುಕಡಿಗಳು ಬಂದಿದ್ದು, ವಿವಿಧ ಮತಕ್ಷೇತ್ರಗಳಲ್ಲಿ ಇಂದು ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ. ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ ಅವರು ಮಾತನಾಡಿ, ಮತದಾರರು ಯಾವುದೇ ಭಯಪಡದೇ ನಿರ್ಭೀತಿಯಿಂದ ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಶಾಂತಿಯುತ ಮತದಾನ ನಡೆಸುವ ನಿಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಎಲ್ಲ ರೀತಿಯ ಸಕಲ ವ್ಯವಸ್ಥೆ ಮಾಡಿಕೊಂಡು ಸನ್ನದ್ಧವಾಗಿದೆ. ಮುದ್ದೇಬಿಹಾಳ, ಬಬಲೇಶ್ವರ, ಸಿಂದಗಿ, ಹಾಗೂ ಇಂಡಿಯಲ್ಲೂ ಕೇಂದ್ರ ಸಶಸ್ತç ಮೀಸಲು ಪಡೆಗಳ ಮೂಲಕ ಇಂದು ರೂಟ್ ಮಾರ್ಚ್ ನಡೆಸಲಾಯಿತು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ, ಮತದಾರರು ಮೇ 10 ರಂದು ನಡೆಯುವ ಮತದಾನದಲ್ಲಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ದೊಡ್ಡ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. 6ನೇ ಬಟಾಲಿಯನ್ ಆಸ್ಸಾಂನ ಪೊಕ್ರಾಜಾಲ ಪಡೆಯ ಮುಖ್ಯಸ್ಥರಾದ ಅಸಿಸ್ಟಂಟ್ ಕಮಾಂಡೆAಡ್ ಪೂರ್ಣಚಂದ್ರ ಸಿಂಗ್ ನೇತೃತ್ವದಲ್ಲಿ ಸೇನೆಯ 70 ಜನ ಯೋಧರು ಹಾಗೂ ವಿಜಯಪುರ ಜಿಲ್ಲೆಯ 100 ಜನ ಪೊಲೀಸರು ಈ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿಲ್ಲಾ ಪಂಚಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ,ಡಿವೈಎಸ್ಪಿ ಸಿದ್ಧೇಶ್ವರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.