ಮೈಸೂರು/Mysore: ಗೃಹಣಿ(house wife) ಅನುಮಾನಸ್ಪದ ರೀತಿಯಲ್ಲಿ ಅಸುನೀಗಿರುವ ಘಟನೆ ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕಿನ ಬನ್ನೂರು ಸಮೀಪ ಬಿ ಸೀಹಳ್ಲಿ ಗ್ರಾಮದಲ್ಲಿ ನಡೆದಿದೆ. ಜೀವಿತಾ (28) ಸಾವಿಗೀಡಾದ ಗೃಹಿಣಿ. ಅಲ್ಲದೇ, ಗಂಡ, ಅತ್ತೆ ಹಾಗೂ ಮಾವ ಸೇರಿ ಕೊಲೆ ಮಾಡಿರುವ ಬಗ್ಗೆ ಜೀವಿತಾ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಮದುವೆಯಾಗಿ ಹಲವು ವರ್ಷ ಕಳೆದರೂ ಗಂಡ(husband), ಅತ್ತೆ ನಿತ್ಯ ಕಿರುಕುಳ ನೀಡುತ್ತಿದ್ದರು. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜೀವಿತಾ ದೇಹ(dead body) ಪತ್ತೆಯಾಗಿದೆ. ಆಕೆಯನ್ನು ಗಂಡ ಮನೆಯವರೇ ಕೊಲೆ ಮಾಡಿದ್ದಾರೆಂದು ಜೀವಿತಾ ಕುಟುಂಬದವರ ದೂರು ನೀಡಿದ್ದಾರೆ. ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.