ಚೆನ್ನೈ: ಯೂಟ್ಯೂಬ್ ನೋಡಿಕೊಂಡು ತನ್ನ ಧರ್ಮಪತ್ನಿಗೆ ಹೆರಿಗೆ ಮಾಡಲು ಹೋಗಿ ತೀವ್ರ ರಕ್ತಸ್ರಾವವಾಗಿ ಪತ್ನಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ನಡೆದಿದೆ. ಸ್ಥಳೀಯ ಪುಲಿಯಂಪಟ್ಟಿ ನಿವಾಸಿ (27) ಲೋಗನಾಯಕಿ ಮೃತ ಗರ್ಭಿಣಿ. ಲೋಗನಾಯಕಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಪತಿ ಮಾದೇಶ್ ಯೂಟ್ಯೂಬ್ ನೋಡಿಕೊಂಡು ಹೆರಿಗೆ ಮಾಡಲು ಮುಂದಾಗಿದ್ದಾನೆ. ಅಲ್ಲದೇ, ನೈಸರ್ಗಿಕವಾಗಿ ಹೆರಿಗೆಗೆ ಪ್ರಯತ್ನಿಸಿದ ವೇಳೆ ತೀವ್ರ ರಕ್ತಸ್ರಾವವಾಗಿ ಪತ್ನಿ ಮೃತಪಟ್ಟಿದ್ದಾಳೆ ಎಂದು ವರದಿ ಆಗಿದೆ. ಕರುಳು ಬಳ್ಳಿಯನ್ನು ಕತ್ತರಿಸದ ಕಾರಣ ತೀವ್ರ ರಕ್ತಸ್ರಾವವಾಗಿ ಅಸುನೀಗಿದ್ದಾಳೆ. ಈ ಕುರಿತು ಪತಿ ವಿರುದ್ಧ ಕೇಸ್ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ.