ವಿಜಯಪುರ: ಅನುಮಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿರುವ ಘಟನೆ ವಿಜಯಪುರ ನಗರದ ಗಾಂಧಿಚೌಕ್ ಬಳಿ ನಡೆದಿದೆ.
ಶಾಪೇಟ್ ಅಗಸಿ ನಿವಾಸಿ 45 ವರ್ಷದ ಪಾಪು ಬೊರಗಿ ಮೃತಪಟ್ಟಿರುವ ದುರ್ದೈವಿ. ಇನ್ನು ನಗರದ ಗಾಂಧಿಚೌಕ್ ನಲ್ಲಿ ಬೊರಗಿ ಶವ ಪತ್ತೆಯಾಗಿದೆ. ಆದ್ರೇ, ಸಾವಿಗೆ ನಿಖರವಾದ ಘಟನೆ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.