ವಿಜಯಪುರ: ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ದೇವರಹಿಪ್ಪರಗಿ ಇಂಡಿ ರಸ್ತೆಯಲ್ಲಿ ನಡೆದಿದೆ. ಇನ್ನೂ ಅಪಘಾತವಾದ ಬಗ್ಗೆ 112ಗೆ ಕರೆ ಮಾಡಿದ್ದು, ತಕ್ಷಣ ಸ್ಥಳಕ್ಕೆ ಪೊಲೀಸರು ಹೋಗಿ ವಿಚಾರಿಸಿದರು. ಅಲ್ಲದೇ, ಬೈಕ್ ಸವಾರನಿಗೆ ತೀವ್ರತರವಾದ ರಕ್ತ ಗಾಯವಾಗಿದ್ದು, ಕೂಡಲೇ ಅಂಬ್ಯುಲೆನ್ಸ್ ಕರೆಸಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಮುಂದಿನ ಕ್ರಮಕ್ಕಾಗಿ ದೇವರಹಿಪ್ಪರಗಿ ಠಾಣೆಗೆ ಮಾಹಿತಿ ನೀಡಿದರು. ದೇವರಹಿಪ್ಪರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.