ವಿಜಯಪುರ: ಮನೆ ಕಳ್ಳತನಕ್ಕೆ ಯತ್ನಿಸಿರುವ ವೇಳೆಯಲ್ಲಿ ಕಳ್ಳನೋರ್ವ ಮನೆಯ ಮಾಲೀಕನ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಗ್ರಾಮದಲ್ಲಿ ನಡೆದಿದೆ.
ಗೌಡಪ್ಪ ಹೊನ್ನಳ್ಳಿ ಎಂಬುವರ ಯತ್ನಿಸಿ, ಸಿಕ್ಕಿಬಿದ್ದಿರುವ ಕಳ್ಳನ ಕುರಿತು ಮಾಹಿತಿ ಹಾಗೂ ಹೆಸರು ಲಭ್ಯವಾಗಿಲ್ಲ. ಅಲ್ಲದೇ, ಸಿಕ್ಕಿಬಿದ್ದಿದ್ದ ಕಳ್ಳನಿಗೆ ಕೈ, ಕಾಲಿಗೆ ಹಗ್ಗದಿಂದ ಕಟ್ಟಿ ಹಾಕಿ, ತದನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಕಳ್ಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.