K1N ಡೆಸ್ಕ್: WWE ಸ್ಟಾರ್ ಬ್ರೇ ವ್ಯಾಟ್ ಅಕಾಲಿಕವಾಗಿ ನಿಧನರಾದರು ಎಂದು ಕಂಪನಿಯ ಸಿಸಿಒ ಪಾಲ್ ಲೆವೆಸ್ಕ್ ಮಾಹಿತಿ ತಿಳಿಸಿದ್ದಾರೆ. ಡಬ್ಲ್ಯೂ ಡಬ್ಲ್ಯೂಇ ಹಾಲ್ ಆಫ್ ಫೇಮರ್ ಮೈಕ್ ರೊಟುಂಡಾ ಇದೀಗ ಕರೆ ಬಂದಿದೆ. ಅವರು ನಮ್ಮ ಡಬ್ಲ್ಯೂ ಡಬ್ಲ್ಯೂಇ ಕುಟುಂಬದಲ್ಲಿ ಬ್ರೇ ವ್ಯಾಟ್ ಎಂದು ಕರೆಯಲ್ಪಡುವ ವಿಂಡಮ್ ರೊಟುಂಡಾ ಅನಿರೀಕ್ಷಿತವಾಗಿ ನಿಧನರಾಗಿದ್ದಾರೆ. ಇದು ದುರಂತ ಸುದ್ದಿಯನ್ನು ನಮಗೆ ತಿಳಿಸಿದರು. ಇಎಸ್ಪಿಎನ್ ಪ್ರಕಾರ, ಬ್ರೇ ವ್ಯಾಟ್ ಅವರ ನಿಜವಾದ ಹೆಸರು ವಿಂಡ್ಹ್ಯಾಮ್ ರೋಟುಂಡಾ. ಅವರು ಬಹಿರಂಗಪಡಿಸದ ಆರೋಗ್ಯ ಸಮಸ್ಯೆಯೊಂದಿಗೆ ಬಳಲುತ್ತಿದ್ದರು. ಕಳೆದ ಹಲವಾರು ತಿಂಗಳುಗಳಿಂದ ಡಬ್ಲ್ಯೂ ಡಬ್ಲ್ಯೂಇ ನಲ್ಲಿ ಭಾಗವಹಿಸುತ್ತಿರಲಿಲ್ಲ. ಅವರು 2009 ರಿಂದ ಡಬ್ಲ್ಯೂ ಡಬ್ಲ್ಯೂಇ ನೊಂದಿಗೆ ಇದ್ದರು. 2021 ಮತ್ತು 2022ರಲ್ಲಿ ಸಕ್ರಿಯರಾಗಿರದ ರೊಟುಂಡಾ ಕಳೆದ ಸೆಪ್ಟೆಂಬರ್ ನಲ್ಲಿ ಡಬ್ಲ್ಯೂ ಡಬ್ಲ್ಯೂಇ ಗೆ ವಾಪಸ್ ಆಗಿದ್ದರು. ಅವರ ನಿಧನದಿಂದ WWEಗೆ ತುಂಬಲಾರದ ನಷ್ಟ ಆಗಿದೆ.
![](https://karnataka1news.com/wp-content/uploads/2023/08/IMG_20230825_101203-1016x1024.jpg)