ವಿಜಯಪುರ: ಉರುಸ್ ಕಾರ್ಯಕ್ರಮದಲ್ಲಿ ಹಾಡು(Songs) ಗಾಗಿ ಯುವಕನ ಮೇಲೆ 14 ಜನರು ಹಲ್ಲೆಗೈದಿರುವ ಘಟನೆ ವಿಜಯಪುರ ತಾಲ್ಲೂಕಿನ ಡೊಮನಾಳ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಡೊಮನಾಳ ಉರುಸ್ ವೇಳೆ ಯುವಕ ಸಾಗರ್ ಮೇಲೆ ಹಲ್ಲೆಗೈದಿದ್ದಾರೆ. ಇನ್ನು ಹಲ್ಲೆಗೈದಿರುವ 14 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. ಅಲ್ಲದೇ, ಉರುಸ್ ವೇಳೆಯಲ್ಲಿ ಹಾಡುವೊಂದು ಹಚ್ಚಲಾಗಿದೆ. ಈ ವೇಳೆಯಲ್ಲಿ ಸಾಗರ್ ಡ್ಯಾನ್ಸ್ ಮಾಡುತ್ತಿದ್ದನು. ಇದನ್ನು ನೋಡಿ ಸಾಂಗ್ ಬಂದ್ ಮಾಡಿ, 14 ಜನರು ಸಾಗರ್ನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.
ಗಾಯಗೊಂಡಿರುವ ಸಾಗರ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋರ್ಟ್..
ಸಾಂಗ್ ಬಂದ್ ಮಾಡಬೇಡಿ.. ಸಾಂಗ್ ಹಚ್ಚುವಂತೆ ಮನವಿ ಮಾಡಿದ್ದೆ. ಆದ್ರೇ, ಏಕಾಏಕಿ ಹಲವು ಜನರು ನನ್ಮೇಲೆ ಹಲ್ಲೆ ಮಾಡಿದ್ದಾರೆ. ಅದಕ್ಕಾಗಿ ದೂರು ದಾಖಲು ಮಾಡಿದ್ದೇನೆ.. ಸಾಗರ್..
ಸಾಗರ್ ಮೇಲೆ ಹಲ್ಲೆಗೈದಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೇ, ಹೋದ್ರೇ ಉಗ್ರ ಹೋರಾಟ ಮಾಡುತ್ತೇವೆ.. ಹೋರಾಟಗಾರ ಸಂಜು..