ವಿಜಯಪುರ: ಮನೆಯ ಎದುರು ಕಸ ಗುಡಿಸುವಾಗ ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಕಳ್ಳತನಗೈದು ಎಸ್ಕೇಪ್ ಆಗಿರುವ ಘಟನೆ ವಿಜಯಪುರದ ಕೀರ್ತಿ ನಗರದಲ್ಲಿ ನಡೆದಿದೆ. ಲಕ್ಷ್ಮಿ ಕೆಂಗನಾಳ ಕೊರಳಿನಲ್ಲಿದ್ದ ಸುಮಾರು ಮೂರು ತೊಲಿ ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇನ್ನು ಮನೆಯ ಎದುರು ಕಸ ಗುಡಿಸುವಾಗ ಹಿಂದಿಯಲ್ಲಿ ವಿಳಾಸ ಕೇಳುವ ನೆಪದಲ್ಲಿ ಲಕ್ಷ್ಮಿ ಕೊರಳಿನಲ್ಲಿದ್ದ ಚಿನ್ನದ ಸರಗಳ್ಳತನಗೈದರು ಪರಾರಿಯಾಗಿದ್ದಾರೆ. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.