ವಿಜಯಪುರ: ಶಾಸಕ ಯತ್ನಾಳಗೆ ತಲೆಗೆ ಬಾಯಿಗೆ ಲಿಂಕ್ ಇಲ್ಲ ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಕಿಡಿಕಾರಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಉಡಾಫೆ ಉತ್ತರ ನೀಡುವ ಹ್ಯಾಬಿಟ್ ಯತ್ನಾಳಗೆ ಇದೆ. ಆದ್ರೇ, ಉಡಾಫೆಗೆ ನಾನು ಉತ್ತರ ನೀಡಲ್ಲ. ಇನ್ನು ನಾನು ನಾಟಕ ಮಾಡಿಲ್ಲ. ಹಿಂದೆ ಮುಂದೆ ಮಾಡುವವರು ನಾಟಕ ಮಾಡುತ್ತಾರೆ. ನನಗೂ ಮಾತಾಡೋಕೆ ಬರುತ್ತದೆ. ನನಗೂ ಮಾತಾಡೋಕೆ ಶಬ್ದಗಳು ಇದ್ದಾವೆ. ನನ್ನ ಬಳಿಯೂ ಶಬ್ದದ ಗ್ರಂಥಾಲಯ ಇದೆ. ಅಲ್ಲದೇ, ನಿಮ್ಮ ಮಾತು ಕಡಿಮೆ ಇದ್ರೇ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅದಕ್ಕಾಗಿ ನೀವು ಅವಲೋಕನ ಮಾಡಿಕೊಳ್ಳಬೇಕು ಎಂದರು.