ವಿಜಯಪುರ: ಬಿಜೆಪಿ ಕಾರ್ಯಕರ್ಯರ ಸಭೆಯಲ್ಲಿ ಶಾಸಕ ಯತ್ನಾಳ ಬೆಂಬಲಿಗರು ಗಲಾಟೆ ನಡೆಸಿರುವ ಘಟನೆ ವಿಜಯಪುರ ನಗರದ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಸೋಮವಾರ ಸಂಜೆ ನಡೆದಿದೆ. ಇನ್ನೂ ಕಾರ್ಯಕರ್ತರ ಸಭೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಭಾಷಣ ಮುಗಿಯುತ್ತಿದ್ದಂತೆ ವೇದಿಕೆ ಎದುರು ಆಗಮಿಸಿದ ಕಾರ್ಯಕರ್ತರು ಬಿಆರ್ ಪಿ….ಬಿಆರ್ ಪಿ ಎಂದು ಘೋಷಿಸಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದರು. ನಿಗದಿತ ಅವಧಿಗಿಂತ ತಡವಾಗಿ ಆರಂಭಗೊಂಡ ಕಾರ್ಯಕ್ರಮಕ್ಕೆ ಶಾಸಕ ಯತ್ನಾಳ ಗೈರಾಗಿದ್ದರು. ಬಳಿಕ ಕಾರ್ಯಕ್ರಮ ಆರಂಭಗೊಳ್ಳಿತ್ತಿದ್ದಂತೆ ಕಾರ್ಯಕರ್ತರು ಜಮಾಯಿಸಿ ಆಕ್ರೋಶ ಹೊರಹಾಕಿದರು.