ವಿಜಯಪುರ: ವಿಜಯಪುರ ನಗರದ ದೌಲತಕೋಟೆ ರಸ್ತೆಯಲ್ಲಿರುವ ಉರ್ದು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ.1ರ ಪ್ರಯೋಗಾಲಯದ ಕೀಲಿ ಮುರಿದು ವಸ್ತುಗಳನ್ನು ಕಳ್ಳರು ಕಳ್ಳತನಗೈದು ಪರಾರಿಯಾಗಿದ್ದಾರೆ.
ಪ್ರಯೋಗಾಲಯದಲ್ಲಿದ್ದ ಎರಡು ಮೈಕ್ರೋಸ್ಕೋಪ್, 2 ಟ್ರೈಪಾಡ್ ಸ್ಟ್ಯಾಂಡ್ ಮತ್ತು ಟ್ರೈಯಂಗಲ್ ಟ್ಯಾಪ್, ಸ್ಪಿರಿಟ್ ಲ್ಯಾಂಪ್, ಸ್ಪಿರಿಟ್ ಬಾಟಲ್, ಟೆಸ್ಟ್ ಟ್ಯೂಬ್ ಸ್ಟ್ಯಾಂಡ್, ವಾಟರ್ ಸೈಕಲ್, ಎಗ್ ಡೌಲ್ಪಮೆಂಟ್ ವೀಲ್, ಮಕ್ಕಳ ಊಟದ ಸ್ಟೀಲ್ ತಾಟುಗಳು, ಸ್ಟೀಲ್ ಗ್ಲಾಸ್ ಹೀಗೆ ಸುಮಾರು 31,360 ಮೌಲ್ಯದ ಸಾಮಗ್ರಿಗಳು ಕಳುವಾಗಿದೆ. ಘಟನರ ತಡವಾಗಿ ಬೆಳಕಿಗೆ ಬಂದಿದೆ. ಗೋಳಗುಮ್ಮಟ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.