ಹುಬ್ಬಳ್ಳಿ: ಮನೆ ಮುಂದೆ ಕಸ ಗುಡಿಸುವ ಮಹಿಳೆಯ ಚಿನ್ನದ ಸರವನ್ನು ಕಳ್ಳರು ಕಳ್ಳತನಗೈದು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ಆನಂದ ನಗರದಲ್ಲಿ ನಡೆದಿದೆ. 30 ಗ್ರಾಂ ಚಿನ್ನದ ಸರವನ್ನು ಕಳ್ಳರು ಎಗರಿಸಿದ್ದಾರೆ. ಬೈಕ್ ಮೇಲೆ ಬಂದು ಹೊಂಚು ಹಾಕಿ ಚಿನ್ನದ ಸರ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಚಿನ್ನದ ಸರ ಕದ್ದು ಪರಾರಿಯಾಗಿರೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೇ, ಸರ ಕಿತ್ತುಕೊಳ್ಳುತ್ತಲೇ ಕಳ್ಳರ ಹಿಂದೆ ಓಡೋಡಿ ಮಹಿಳೆ ಹೋಗಿದ್ದಾಳೆ. ಆದ್ರೇ, ಸರ ಕದ್ದು ಬೈಕ್ ನಲ್ಲಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.