ವಿಜಯಪುರ: ಮಹಿಳೆಯೋರ್ವಳು 7 ಗಂಟೆಯಲ್ಲಿ 24 ಟನ್ 500 ಕೆಜಿ ಕಬ್ಬನ್ನು ಒಬ್ಳೆ ಟ್ರ್ಯಾಕ್ಟರ್ಗೆ ಲೋಡ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಹೊನವಾಡ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ರೈತ ಮಹಿಳೆ ದುರ್ಗಮ್ಮ ಭೀಮಣ್ಣ ಗಣಾಚಾರಿ ಈ ಸಾಹಸ್ ಮಾಡಿದವರು. ಇನ್ನೂ ಸತತವಾಗಿ ಏಳು ಗಂಟೆಯಲ್ಲಿ ಒಬ್ಬೊಬ್ಬರಾಗಿ 24 ಟನ್ 500 ಕೆಜಿ ಕಬ್ಬನ್ನು ಟ್ರ್ಯಾಕ್ಟರ್ಗೆ ಲೋಡ್ ಮಾಡುವ ಮೂಲಕ ಪುರುಷರಿಗೆ ಸೆಡ್ಡು ಹೊಡೆದಿದ್ದಾರೆ. ಇದರಿಂದ ಸ್ಥಳೀಯರು ದುರ್ಗಮ್ಮನಿಗೆ ಶಹಬಾಷ್ಗಿರಿ ನೀಡಿದ್ದಾರೆ. ಸಂತೋಷ ಮಾಲಗಾರ ಕಬ್ಬು ಗಾಡಿಯ ಮಾಲೀಕರಾಗಿದ್ದಾರೆ.