ವಿಜಯಪುರ/ಬೆಳಗಾವಿ: ಹದಿ ಹರಿಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಹಿಂದೆ ಬಿದ್ದ ಯುವಕನನ್ನು ಯುವತಿಯ ಮನೆಯರು ವಿಜಯಪುರ ಜಿಲ್ಲೆಯ ಕೋಲಾರ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಕೊಣೆಯಲ್ಲಿ ಮನಸೋ ಇಚ್ಚೆ ಹಲ್ಲೆ ಮಾಡಿದ ಪರಿಣಾಮ ಯುವಕ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಕೋಲಾರದಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಕಂಬಾರ (24) ಆತನ ಮನೆಯ ಎದುರಿಗಿನ ಯುವತಿಯೊಂದಿಗೆ ಪ್ರೀತಿ ಮಾಡುತ್ತಿದ್ದ. ಆದರೆ ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ಮಾಡಿಕೊಟ್ಟಿದ್ದರೂ ರಾಘವೇಂದ್ರನ ಮೇಲಿನ ವ್ಯಾಮೋಹ ಹೋಗಿರಲಿಲ್ಲ. ಗಂಡನ ಮನೆಯಿಂದ ತವರು ಮನೆಗೆ ಬಂದಾಗ ಯುವತಿ ರಾಘವೇಂದ್ರನನ್ನು ಭೇಟಿಯಾಗಿರುವ ವಿಷಯ ಯುವತಿಯ ತಾಯಿಗೆ ಗೊತ್ತಾಗಿ ಮಂಗಳವಾರ ವೀರಭದ್ರೇಶ್ವರ ದೇವಸ್ಥಾನದ ಕೊಠಡಿಯೊಂದರಲ್ಲಿ ಹಾಕಿ ಮನಸೋ ಇಚ್ಚೆ ತಳಿಸಿದ್ದಾರೆ.
ರಾಘವೇಂದ್ರನ ಕುಟುಂವ ಬಡತನದ ಕೋಲಾರದಿಂದ ಬಾಗಲಕೋಟೆ- ಬಾಗಲಕೋಟೆಯಿಂದ ಬೆಳಗಾವಿಗೆ ಖಾಸಗಿ ಆಸ್ಪತ್ರೆಗೆ ಚಕಿತ್ಸೆಗೆ ದಾಖಲಿಸಿದರೂ ಐದು ಲಕ್ಷ ಹಣ ಕಟ್ಟುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಶುಕ್ರವಾರ ಚಿಕಿತ್ಸೆ ಫಲಿಸದೆ ರಾಘವೇಂದ್ರ ಮೃತಪಟ್ಟಿದ್ದಾನೆ. ಈ ಕುರಿತು ತನಿಖೆ ಮುಂದುವರಿದೆ.