ವಿಜಯಪುರ: ಸಂವಿಧಾನವನ್ನು ವಿಧಿ ಇಲ್ಲದೇ ಒಪ್ಪಿರುವವರು ಇಂದು ಪುನಃ ಜನರಲ್ಲಿ ಮೌಢ್ಯ ಬಿತ್ತಿ ಹಳೆಯ ವ್ಯವಸ್ಥೆಯನ್ನು ಮರುಸ್ಥಾಪಿಸುತ್ತಿದ್ದಾರೆ ಎಂದು ಮಾಜಿ ಅಧ್ಯಕ್ಷ ರಮೇಶಕುಮಾರ್ ವಿಷಾದಿಸಿದರು.
ನಗರದ ಬಿಎಲ್ಡಿಇ ಡೀಮ್ಡ್ ವಿವಿ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಗ್ರಂಥಾಲಯ ಸಭಾಂಗಣದಲ್ಲಿ ಚಿಂತನ ಸಾಂಸ್ಕøತಿಕ ಬಳಗದ ವತಿಯಿಂದ ಬಿಎಲ್ಡಿಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಪೂಜ್ಯ ಡಾ.ಫ.ಗುಹಳಕಟ್ಟಿ, ಬಂಥನಾಳ ಶಿವಯೋಗಿಗಳ, ಮಹಾದಾನಿ ಬಂಗಾರಮ್ಮ ಸಜ್ಜನ, ಶಿಕ್ಷಣ ಪ್ರೇಮಿ ದಿ.ಬಿ.ಎಂ.ಪಾಟೀಲರವರ ಸ್ಮರಣೆ ನಿಮಿತ್ತ `ವರ್ತಮಾನದ ಬದುಕು’ ಎಂಬ ವಿಷಯದ ಕುರಿತು ದಿಕ್ಸೂಚಿ ಉಪನ್ಯಾಸ ಮಂಡಿಸಿ ಅವರು ಮಾತನಾಡಿದರು.
ಸಂವಿಧಾನ ಇರದಿದ್ದಾಗ ಸಮಾನತೆ ಇರಲಿಲ್ಲ, ಸಂವಿಧಾನ ಬಂದಿದೆ ಈಗ ರಾಜ ಇಲ್ಲ, ಕಿರೀಟವಿಲ್ಲ, ಆಂಗ್ಲರು ನಮ್ಮನ್ನಾಳಿದರು, ಆಂಗ್ಲ ನಾಡಿನಲ್ಲಿ ಚರ್ಚ್ಗಳು ಪಾರುಪತ್ಯ ತೋರಿದ್ದವು, ರಾಜನು ಸಹ ಚರ್ಚ್ ಅಣತಿಯಂತೆ ಕಾರ್ಯನಿರ್ವಹಿಸಬೇಕಾಗಿತ್ತು, ನಮ್ಮಲ್ಲಿಯೂ ಸಹ ಧರ್ಮಾಧಾರಿತ ವ್ಯವಸ್ಥೆ ವ್ಯವಸ್ಥೆಯನ್ನು ಹತೋಟಿಗೆ ತೆಗೆದುಕೊಳ್ಳುವಾಗ ನಮ್ಮಲ್ಲಿ ಬಸವಣ್ಣ ಜನಿಸಿದರು, ಲಿಂಗ, ಜಾತಿ, ದುಡಿಮೆಗೆ ಬೆಲೆ ಇಲ್ಲದ ಕಾಲಘಟ್ಟದಲ್ಲಿ ಸಿಟ್ಟಿಗೆದ್ದು ಸರಿ ಇಲ್ಲದ್ದನ್ನು ಖಂಡಿಸಿದರು ಎಂದರು.
ಮನುಸ್ಮøತಿಯ ವಿಚಾರಧಾರೆಯನ್ನು ಸಂವಿಧಾನದ ಮೂಲಕ ಕಿತ್ತುಕೊಳ್ಳಲಾಗಿದೆ, ಹೀಗಾಗಿ ಮನುಸ್ಮøತಿಯ ಪುನರಸ್ಥಾಪನೆಗಾಗಿ ಒಂದು ಗುಂಪು ಸಕ್ರೀಯವಾಗಿದೆ ಎಂದರು.
ಪ್ರತ್ಯೇಕ ಚುನಾವಣಾ ಪದ್ಧತಿಗಾಗಿ ಮಹಾತ್ಮಾ ಗಾಂಧೀಜಿ ಒಪ್ಪಲಿಲ್ಲ, ಹಿಂದೂ ಧರ್ಮ ಒಡೆಯಬಹುದು ಎಂಬ ಕಾರಣಕ್ಕೆ ಈ ಪದ್ಧತಿಯನ್ನು ವಿರೋಧಿಸಿದದರು, ಹಿಂದೂ ಧರ್ಮವನ್ನು ಒಡೆಯದಂತೆ ನೋಡಿಕೊಂಡ ಗಾಂಧೀಜಿ ಅವರನ್ನೇ ಕೊಂದ ಸಮುದಾಯ ಇಂದು ಹಿಂದೂ ಹಿಂದೂ ಎಂದು ಭೋರ್ಗರೆಯುತ್ತಿದೆ ಎಂದು ವಿಷಾದಿಸಿದರು.
ನಮ್ಮದಲ್ಲದ ಭೂಮಿಯನ್ನು ವಶಪಡಿಸಿಕೊಂಡ ಕೇಸುಗಳು ರಾಜಕಾರಣಿಗಳ ಮೇಲೆ ರಾರಾಜಿಸುತ್ತಿವೆ, ಆಗ ಬಂಗಾರೆಮ್ಮ ಸಜ್ಜನ ಎನ್ನುವ ಮಹಾತಾಯಿ ಬೆಲೆಬಾಳುವ ಜಮೀನನ್ನು ಶಿಕ್ಷಣ ಕ್ರಾಂತಿಗೆ ಬಂಥನಾಳ ಶಿವಯೋಗಿಗಳಿಗೆ ಸಮರ್ಪಿಸಿದರು. ಡಾ.ಹಳಕಟ್ಟಿ ಅವರು ವಚನ ಸಾಹಿತ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು, ಬಂಥನಾಳ ಶೀವಯೋಗಿಗಳು ಶೈಕ್ಷಣಿಕ ಗಂಗೆಯನ್ನೇ ಹರಿಸಿದರು, ಹಂಗಿನ ರಾಜಕಾರಣವಿಲ್ಲದೇ ಜನಪರ ರಾಜಕಾರಣ ಮಾಡಿದವರು ಬಿ.ಎಂ. ಪಾಟೀಲರು ಎಂದರು.
ಬೆಂಗಳೂರು ಸರ್ಪಭೂಷಣ ಶಿವಯೋಗಿಗಳ ಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಶರಣ ಸಾಹಿತ್ಯವನ್ನೇ ಪ್ರಾಣವಾಗಿಸಿಕೊಂಡಿದ್ದ ಡಾ.ಹಳಕಟ್ಟಿ ಅವರು ಸಹ ಶ್ರೇಷ್ಠ ಶರಣರು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಬಿಎಲ್ಡಿಇ ಸಂಸ್ಥೆ ಅಧ್ಯಕ್ಷ ಎಂ.ಬಿ. ಪಾಟೀಲ ಮಾತನಾಡಿದರು.
ಮಹಾಂತೇಶ ಮಹಾಂತಪ್ಪ ಗಜೇಂದ್ರಗಢ, ಗಿರಿಜಾ ಚಂದ್ರಶೇಖರ ಶಿವಬಲ, ಕಾರ್ತಿಕರಾಜು ಕುಬಸದ ಅವರನ್ನು ಸನ್ಮಾನಿಸಲಾಯಿತು.