ವಿಜಯಪುರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ನೆನೆದು ಸಾರ್ವಜನಿಕ ಶೌಚಾಲಯ ಮೇಲ್ಛಾವಣಿ ಕುಸಿದು ಬಿದ್ದಿರುವ ಘಟನೆ ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಇನ್ನೂ ಶೌಚಾಲಯದಲ್ಲಿ ಮೂವರು ಮಹಿಳೆಯರು ಸಿಲುಕಿಕೊಂಡಿರುವ ಅವಘಡ ಸಂಭವಿಸಿದೆ. ತಕ್ಷಣವೇ ಮೂವರು ಮಹಿಳೆಯರನ್ನು ಗ್ರಾಮಸ್ಥರು ಹೊರ ತೆಗೆದಿದ್ದಾರೆ. ಕಮಲಾಬಾಯಿ ಬಗಲಿ, ಮುಸ್ಕಾನ್ ಕೊಲ್ಹಾರ,
ಮುರ್ತುಜಭೀ ಭಾಂಗಿ ಎಂಬ ಮೂವರಿಗೆ ಗಾಯಾಳು ಆಗಿದ್ದಾವೆ. ಅದಕ್ಕಾಗಿ ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
![](https://karnataka1news.com/wp-content/uploads/2023/07/IMG_20230721_104602-1024x593.jpg)