ವಿಜಯಪುರ: ಆನ್ಲೈನ್ನಲ್ಲಿ ಉದ್ಯಮಿಗೆ ವಂಚಿಸಿದ ಮೂವರು ನೈಜೀರಿಯಾ ದೇಶದ ಪ್ರಜೆಗಳನ್ನು ವಿಜಯಪುರ ನಗರದಲ್ಲಿ ಬಂಧಿಸಲಾಗಿದೆ. ಪೀಟರ್, ಹ್ಯಾಪಿ, ಓಬಿನ್ನಾ ಸ್ಟಾಲೀನ್ ಬಂಧಿತ ಆರೋಪಿಗಳು. ನಗರದ ಉದ್ಯಮಿಯೊಬ್ಬರಿಗೆ 59,12,765 ನಗದು ವಂಚನೆ ಮಾಡಿದ್ದರು. ಇನ್ನೂ ಕ್ರಿಪ್ಟೋ ಮೈನಿಂಗ್ ಮೂಲಕ ಹಣ ಹೂಡಿಕೆ ಮಾಡಿದ್ರೇ 20% ಲಾಭಾಂಶ ಪಡೆಯಬಹುದು ಎಂದು ಆರೋಪಿಗಳು ನಂಬಿಸಿ, ನಗದು ವಂಚಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೊದಲ ಐದು, ಇದೀಗ್ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 21 ಮೊಬೈಲ್, 18 ಸೀಮ್ಗಳು, ಒಂದು ಲ್ಯಾಪ್ಟಾಪ್, ಎರಡು ಪೇನ್ಡ್ರೈವ್, ಒಂದು ಡೊಂಗಲ, ಎರಡು ಎಟಿಎಂ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ವಿಜಯಪುರ ಸಿಇಒ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.