ವಿಜಯಪುರ: ಮೂವರು ಅಪ್ರಾಪ್ತರ ಮೇಲೆ ಬೀದಿ ನಾಯಿಯೊಂದು ದಾಳಿಗೈದಿರುವ ಘಟನೆ ವಿಜಯಪುರ ನಗರದ ಬಡಿ ಕಮಾನ್ ಬಳಿ ನಡೆದಿದೆ. ಇನ್ನು ಮೂವರು ಅಪ್ರಾಪ್ತರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೇ, ಅಪ್ರಾಪ್ತರ ಮೇಲೆ ಬೀದಿ ನಾಯಿ ದಾಳಿ ವೇಳೆ ಬಿಡಿಸಲು ಬಂದಿದ್ದ ವೃದ್ಧೆಯೂ ಗಾಯಗೊಂಡಿದ್ದಾರೆ. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.