ವಿಜಯಪುರ: ಸಾರಿಗೆ ನೌಕರರು ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಜಯಪುರ ನಗರದ ಸಾರಿಗೆ ಕಚೇರಿಯ ಎದುರು ಮಂಗಳವಾರ ಸಾರಿಗೆ ನೌಕರರು ಧರಣಿ ಸತ್ಯಾಗ್ರಹ ನಡೆಸಿದರು.
ಸರ್ಕಾರ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುತ್ತಿದ್ದ ನಿಗಮಗಳು ಆರು ವರ್ಷ ಕಳೆದರೂ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪ ಇಲ್ಲ. ನಿಯಮಬದ್ಧವಾಗಿ 2020 ಮಾರ್ಚ್ ನಲ್ಲಿ ವೇತನ ಪರಿಷ್ಕರಣೆಯಾಗಬೇಕಿತ್ತು ಎಂದು ಕಿಡಿಕಾರಿದರು. ಸಾರಿಗೆ ನೌಕರರಿಗೆ ಶೇ 25 ರಷ್ಟು ವೇತನ ಹೆಚ್ಚಳ ಆಗಬೇಕು. ನೌಕರರ ಹಾಲಿ ಇರುವ ಬಾಟ,ಭತ್ಯೆಗಳು 5 ಪಟ್ಟು ಹೆಚ್ಚಿಸಬೇಕು. ಕಳೆದ ಬಾರಿ ಮುಷ್ಕರ ವೇಳೆ ವಜಾಗೊಂಡ ನೌಕರರ ಮರುನೇಮಕ ಆಗಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.