ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ನಮನಾಂಜಲಿ ಕಾರ್ಯಕ್ರಮ

Karnataka 1 News
ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ನಮನಾಂಜಲಿ ಕಾರ್ಯಕ್ರಮ
ವಿಜಯಪುರ, ಜ. 02: ನಗರದ ಬಿ .ಎಲ್ .ಡಿ  ಇ ಸಂಸ್ಥೆಯ ಜೆ.ಎಸ್.ಎಸ್  ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಗುರುವಾರ ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪುಣ್ಯಸ್ಮರಣೆ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವುದರ ಮೂಲಕ ನಮನಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಐ.ಕ್ಯೂ.ಎ.ಸಿ ಸಂಯೋಜಕ ಡಾ‌. ಎಂ‌‌. ಎಸ್. ಹಿರೇಮಠ ಮಾತನಾಡಿ, ನುಡಿದಂತೆ ನಡೆದ ಶ್ರೀ ಸಿದ್ದೇಶ್ವರ ಶ್ರೀಗಳು ಮಲ್ಲಿಕಾರ್ಜುನ ಮಹಾಸ್ವಾಮಿಗಳ ಪ್ರವಚನದಿಂದ ಪ್ರೇರಣೆಗೊಂಡು ಆಧ್ಯಾತ್ಮಿಕತೆಯಡೆಗೆ ಸಾಗಿ ನಡೆದಾಡುವ ದೇವರೆನಿಸಿಕೊಂಡರು.  ಪೂಜ್ಯೆ ಕಾರ್ಯ, ಕೀರ್ತಿ, ಅಜರಾಮರ.  ಅವರ ವಿಚಾರ ಜೀವನ ಶೈಲಿಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಿ‌. ವೈ. ಖಾಸನೀಸ, ಪ್ರಾಚಾರ್ಯ ಡಾ. ಎಂ. ಬಿ. ಕೋರಿ, ಡಾ. ಜೆ. ಎಸ್ ಪಟ್ಟಣಶೆಟ್ಟಿ, ಡಾ. ಬಿ. ಎಸ್   ಹಿರೇಮಠ, ಎಸ್. ಎಸ್. ಪಾಟೀಲ, ಪಿ. ಡಿ. ಮುಲ್ತಾನಿ, ಡಾ. ಎಸ್. ಪಿ. ಶೇಗುಣಸಿ, ಮತ್ತು ಪ್ರಶಿಕ್ಷಣಾಥಿ೯ಗಳು ಉಪಸ್ಥಿತರಿದ್ದರು.
JSS Collage Siddheshwar Swamiji Namananjali : ವಿಜಯಪುರ ನಗರದ ಬಿ.ಎಲ್.ಡಿ .ಇ ಸಂಸ್ಥೆಯ ಜೆ.ಎಸ್.ಎಸ್  ಶಿಕ್ಷಣ ಮಹಾವಿದ್ಯಾಲಯದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪುಣ್ಯಸ್ಮರಣೆ ಅಂಗವಾಗಿ ಶ್ರೀಗಳಿಗೆ ನಮನಾಂಜಲಿ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಐ.ಕ್ಯೂ.ಎ.ಸಿ ಸಂಯೋಜಕ ಡಾ‌. ಎಂ‌‌. ಎಸ್. ಹಿರೇಮಠ, ಡಾ. ಬಿ‌. ವೈ. ಖಾಸನೀಸ, ಡಾ. ಎಂ. ಬಿ. ಕೋರಿ, ಡಾ. ಜೆ. ಎಸ್ ಪಟ್ಟಣಶೆಟ್ಟಿ, ಡಾ. ಬಿ. ಎಸ್   ಹಿರೇಮಠ, ಎಸ್. ಎಸ್. ಪಾಟೀಲ, ಪಿ. ಡಿ. ಮುಲ್ತಾನಿ, ಡಾ. ಎಸ್. ಪಿ. ಶೇಗುಣಸಿ ಮುಂತಾದವರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";