ವಿಜಯಪುರ: ಮಾಜಿ ಸೈನಿಕ ಅಬ್ದುಲ್ ಹಮ್ಮಿದ್ ಮುಲ್ಲಾ ಹಾಗೂ ಹುತಾತ್ಮ ಯೋಧ ಮಲ್ಲಪ್ಪ ಮಾದರ ಧರ್ಮಪತ್ನಿ ವಿಶ್ವಗಂಗಾಬಾಯಿ ಮಾದರ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಿ ಗೌರವಿಸಿದರು.
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಡಿಸಿ ವಿಜಯಮಹಾಂತೇಶ ದಾನಮ್ಮನವರ ನೇತೃತ್ವದಲ್ಲಿ ಮಾಜಿ ಸೈನಿಕರು ಗೌರವಿಸಿದರು. ಅಲ್ಲದೇ, 1971ರ ಯುದ್ಧದಲ್ಲಿ ವಿಜಯಪುರ ಜಿಲ್ಲೆಯ ಸೈನಿಕರು ಹೋರಾಟ ಮಾಡಿ ಜಯಶಾಲಿ ಆಗಿದ್ದಾರೆ. ಅದಕ್ಕಾಗಿ ಮಾಜಿ ಸೈನಿಕರು, ಜಿಲ್ಲಾಡಳಿತದಿಂದ ಗೌರವ ಸಲ್ಲಿಸಿದರು.