ವಿಜಯಪುರ: ವಿಧಾನಸಭಾ ಚುನಾವಣೆ ಹಿನ್ನೆಲೆ ವಿಜಯಪುರದ ಲಕ್ಷ್ಮೀ ನಗರದಲ್ಲಿ ಸೋಮವಾರ ಪಥ ಸಂಚಲನ ನಡೆಯಿತು. ಬಿಎಸ್ಎಫ್ ಸೈನಿಕರು ಹಾಗೂ ಜಲನಗರ ಪೊಲೀಸರಿಂದ ಖಡಕ್ ಆಗಿ ಪಥ ಸಂಚಲನ ಮಾಡಲಾಯಿತು. ಅಲ್ಲದೇ, ಡಿವೈಎಸ್ಪಿ ಸಿದ್ಧೇಶ್ವರ ಕೃಷ್ಣಾಪುರ, ಗೋಳಗುಮ್ಮಟ್ ಸಿಪಿಐ ವಿಜಯಮಹಾಂತೇಶ ಮಠಪತಿ, ಜಲನಗರ ಪಿಎಸ್ಐ ಮಲ್ಲಿಕಾರ್ಜುನ ತಳವಾರ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಅಲ್ಲದೇ, ಪಥ ಸಂಚಲನದಲ್ಲಿ ಲಕ್ಷ್ಮೀ ನಗರ ನಿವಾಸಿಗಳಿಂದ ಬಿಎಸ್ಎಫ್ ಸೈನಿಕರಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತ ಕೋರಿ, ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಮುಖಂಡರಾದ ದ್ರಾಕ್ಷಿಯಣಿ ಹಿರೇಮಠ, ಜ್ಯೋತಿ ಹಿರೇಮಠ , ಪೂಜಾ ಹಿರೇಮಠ,
ಗೀತಾ ಕಡೆಮನಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.