ವಿಜಯಪುರ: ಬಾವಿಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ಬಾಲಕರು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಸೋಮಶೇಖರ್ ಆಲಮೇಲ್ (16), ಮಲಿಕ್ ನದಾಫ್ (16) ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಬಾವಿಯಲ್ಲಿ ಸ್ನಾನಕ್ಕೆ ಹೋಗಿದ್ದರು. ಈಜಲು ಬಾರದೆ ಇಬ್ಬರು ಗೆಳೆಯರು ಸಾವನ್ನಪ್ಪಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.