ರಾಯಚೂರು: ರಾಜ್ಯದಲ್ಲಿ ದಿನನಿತ್ಯ ಬಿಸಿಲಿನ ತಾಪಮಾನ ಏರಿಕೆ ಆಗುತ್ತಿದೆ. ಇದರಿಂದ ರಾಯಚೂರು ಜಿಲ್ಲೆಯ ಚಿಕ್ಕಸುಗೂರು ಗ್ರಾಮದಲ್ಲಿ ಬಿಸಿಲಿನ ತಾಪಕ್ಕೆ ಇಬ್ಬರು ಮಕ್ಕಳು ಅಸುನೀಗಿದ್ದಾರೆ. ಮೃತ ಮಕ್ಕಳನ್ನು ಆರತಿ (9), ಪ್ರಿಯಾಂಕ್ (7) ಎಂದು ಗುರುತಿಸಲಾಗಿದೆ. ಹುಸೇನಮ್ಮ-ಮಾರುತಿ ದಂಪತಿಯ ಮಕ್ಕಳು ಮೃತಪಟ್ಟಿದ್ದಾರೆ. ಮಾರುತಿಯ ತಂದೆ ಹಾಗೂ ಮತ್ತೊಬ್ಬ ಮಗು ಅಸ್ವಸ್ಥರಾಗಿದ್ದು, ಅಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.