ವಿಜಯಪುರ: ಬೈಕ್ಗೆ ಟಿಪ್ಪರ್ ಡಿಕ್ಕಿಯಾಗಿರುವ ಪರಿಣಾಮ ಇಬ್ಬರು ಸ್ಥಳದಲ್ಲೇ ದುರ್ಮರಣ ಹಾಗೂ ಇಬ್ಬರಿಗೆ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಅತಿ ವೇಗದಿಂದ ವಾಹನ ಚಲಾಯಿಸುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶರಣಮ್ಮ ಕಂಬಳಿ, ನಾಗೇಶ ಶಿವಪೂರೆ ಮೃತಪಟ್ಟಿರುವ ದುರ್ದೈವಿಗಳು. ಅಲ್ಲದೇ, ಆರು ಮತ್ತು ಎಂಟು ವರ್ಷದ ಎರಡು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟಿರುವ ದುರ್ದೈವಿಗಳ ದೇಹಗಳು ಛಿದ್ರಗೊಂಡಿವೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.