ವಿಜಯಪುರ: ಬೈಕ್ಗೆ ಬಸ್ ಡಿಕ್ಕಿಯಾಗಿರುವ ಪರಿಣಾಮ ಸ್ಥಳದಲ್ಲೇ ಇಬ್ಬರು ಅಸುನೀಗಿರುವ ಘಟನೆ ವಿಜಯಪುರ ನಗರದ ಅಥಣಿ ರಸ್ತೆಯಲ್ಲಿ ರವಿವಾರ ನಡೆದಿದೆ. ತಿಕೋಟಾ ಪಟ್ಟಣದ ವಿಶಾಲ ಬಾಲಕೃಷ್ಣ ಶಿಂಧೆ (22) ಹಾಗೂ ರಮೇಶ ಪ್ರಕಾಶ ಮಾಶ್ಯಾಳ (20) ಮೃತಪಟ್ಟ ಬೈಕ್ ಸವಾರರು. ವಿಜಯಪುರದಿಂದ ತಿಕೋಟಾದತ್ತ ಹೊರಟಿದ್ದರು. ಎದುರಿಗೆ ತಿಕೋಟಾದಿಂದ ವಿಜಯಪುರ ಕಡೆಗೆ ಬರುತ್ತಿದ್ದ ಬಸ್ ಅತೀ ವೇಗವಾಗಿ ಡಿಕ್ಕಿ ಹೊಡೆದಿದ್ದರಿಂದ ಇಬ್ಬರೂ ಸವಾರರು ಸ್ಥಳದಲ್ಲೇ ಅಸುನೀಗಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.