ವಿಜಯಪುರ: ಕುಡಿದ ನಶೆಯಲ್ಲಿ ಯುವಕ ಬಿಟ್ ಪೊಲೀಸರ ಮೇಲೆ ಕಲ್ಲು ಎಸೆದಿರುವ ಪರಿಣಾಮ ಇಬ್ಬರು ಪೊಲೀಸರು ಗಾಯಗೊಂಡಿರುವ ಘಟನೆ ವಿಜಯಪುರದ ವಿದ್ಯಾನಗರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಗೋಳಗುಮ್ಮಟ್ ಪೊಲೀಸ ಠಾಣಾ ಬಿಟ್ ಪೊಲೀಸರಾದ ಪೂಜಾರಿ, ಬನ್ನಿಕೊಪ್ಪ ಗಾಯಗೊಂಡಿರುವವರು. ಇನ್ನು ವಿಶಾಲ ನಿಡೋಣಿ ಕುಡಿದ ನಶೆಯಲ್ಲಿ ಕಲ್ಲು ಎಸೆದು ಪರಾರಿಯಾಗಿದ್ದಾನೆ. ಇನ್ನು ನೈಟ್ ವೇಳೆಯಲ್ಲಿ ವಿದ್ಯಾನಗರದಲ್ಲಿ ಗಲಾಟೆ ಆಗಿದೆ ಎಂದು ಮಾಹಿತಿ ಬಂದಿದೆ. ಅದಕ್ಕಾಗಿ ಸ್ಥಳಕ್ಕೆ ಪೊಲೀಸರು ಹೋದಾಗ ಈ ಅವಘಡ ಸಂಭವಿಸಿದೆ. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.