ವಿಜಯಪುರ: ಭಾರತೀಯ ವೈದ್ಯಕೀಯ ಸಂಘದಿಂದ ದೇವರಹಿಪ್ಪರಗಿ ಕ್ಷೇತ್ರದಿಂದ ಡಾ.ಪ್ರಭುಗೌಡ ಲಿಂಗದಳ್ಳಿ ಅವರಿಗೆ ಟಿಕೆಟ್ ಕೊಡಬೇಕು ಎಂದು ಡಾ.ರವಿಕುಮಾರ ಬಿರಾದಾರ ಒತ್ತಾಯಿಸಿದರು. ವಿಜಯಪುರ ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,
ದೇವರಹಿಪ್ಪರಗಿ ಕ್ಷೇತ್ರದಿಂದ ಈಗಾಗಲೇ ಕಾಂಗ್ರೆಸ್ ನಾಯಕರಿಗೆ ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಜನಮಾನಸದಲ್ಲಿರುವ ಪ್ರಭುಗೌಡರಿಗೆ ಕೊಡಬೇಕು. ಜಿಲ್ಲೆಯಲ್ಲಿ ಸಂಘದ ಆರುನೂರು ಜನರಿದ್ದು, ಈ ಹಿಂದೆಯೂ ರಾಜಕೀಯಕ್ಕೆ ನಿಲ್ಲುವವರಿಗೆ ಸ್ಪಂದಿಸಲಾಗಿದೆ. ಸಮಾಜದ ಬೇರೆ ಬೇರೆ ಸ್ಥರಗಳಲ್ಲಿ ಕೆಲಸ ಮಾಡುವವರಿಗೆ ಅವಕಾಶ ದೊರೆಯುತ್ತಿದ್ದು ಅದೇ ರೀತಿ ವೈದ್ಯಕೀಯ ಕ್ಷೇತ್ರಕ್ಕೂ ಅವಕಾಶ ಕೊಡಬೇಕು ಎಂದರು. ಇನ್ನು ವೈದ್ಯರು ಬೆನ್ನೆಲುಬಾಗಿ ನಿಲ್ಲುತ್ತೇವೆ. ವೈದ್ಯಕೀಯ ಕ್ಷೇತ್ರದಿಂದ ಯಾರೇ ಸ್ಪರ್ಧೆ ಮಾಡಿದರು ಸಹಾಯ ಮಾಡುತ್ತೇವೆ ಎಂದರು.