ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ವೈಷ್ಣವಿ ಬಿರಾದಾರ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 5ನೇ ಮತ್ತು ಜಿಲ್ಲೆಗೆ ಪ್ರಥಮ ಹಾಗೂ ಜಾಹ್ನವಿ ತೋಶ್ನಿವಾಲ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಜಿಲ್ಲೆಗೆ ಪ್ರಥಮ ಸ್ಥಾನ(Rank) ಪಡೆಯುವ ಮೂಲಕ ಕಾಲೇಜು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಶ್ರೀ ಬಿ ಎಂ. ಪಾಟೀಲ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವೈಷ್ಣವಿ ಬಿರಾದಾರ ವಾಣಿಜ್ಯ ವಿಭಾಗದಲ್ಲಿ ಒಟ್ಟು 600 ಅಂಕಗಳ ಪೈಕಿ 595 ಅಂಕಗಳನ್ನು ಪಡೆದಿದ್ದಾರೆ. ಕನ್ನಡದಲ್ಲಿ 100, ಇಂಗ್ಲಿಷ್ ನಲ್ಲಿ 96, ಎಕನಾಮಿಕ್ಸ್ ನಲ್ಲಿ 100, ಅಕೌಂಟೆನ್ಸಿಯಲ್ಲಿ 100, ಬ್ಯೂಸಿನೆಸ್ ಸ್ಟಡೀಸ್ ನಲ್ಲಿ 100 ಹಾಗೂ ಸ್ಟಾಟಿಸ್ಟಿಕ್ಸ್ ನಲ್ಲಿ 100 ಅಂಕ ಅಂದರೆ ಒಟ್ಟು ಶೇ. 99.20 ಅಂಕ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅಲ್ಲದೇ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 5ನೇ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಅದೇ ರೀತಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಜಾಹ್ನವಿ ತೋಶ್ನಿವಾಲ ಒಟ್ಟು 600 ಅಂಕಗಳ ಪೈಕಿ 593 ಅಂಕ ಗಳಿಸುವ ಪಡೆದಿದ್ದಾರೆ. ಇಂಗ್ಲಿಷ್ ನಲ್ಲಿ 97, ಹಿಂದಿಯಲ್ಲಿ 100, ಭೌತಶಾಸ್ತ್ರದಲ್ಲಿ 100, ರಸಾಯನಶಾಸ್ತ್ರದಲ್ಲಿ 96, ಗಣಿತದಲ್ಲಿ 100 ಮತ್ತು ಕಂಪ್ಯೂಟರ್ ಸಾಯಿನ್ಸ್ ನಲ್ಲಿ 100 ಅಂಕ ಗಳಿಸಿ ಒಟ್ಟು ಶೇ. 98.80 ಅಂಕ ಗಳಿಸಿದ್ದಾರೆ. ಅಲ್ಲದೇ, ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಇಬ್ಬರೂ ವಿದ್ಯಾರ್ಥಿನಿಯರ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಆಡಳಿತ ಮಂಡಳಿಯ ಪದಾಧಿಕಾರಿಗಳು, ಕಾಲೇಜಿನ ಪ್ರಾಚಾರ್ಯ ನವೀನ ಎಸ್. ಹಾಗೂ ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೇ, ಇಬ್ಬರೂ ವಿದ್ಯಾರ್ಥಿನಿಯರ ಭವಿಷ್ಯ ಉಜ್ವಲವಾಗಿರಲಿ. ಉತ್ತೋರೋತ್ತರವಾಗಿ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು,
*1. ವೈಷ್ಣವಿ ಬಿರಾದಾರ*
*2. ಜಾಹ್ನವಿ ತೋಶ್ನಿವಾಲ*.