ವಿಜಯಪುರ: ಕೆಪಿಟಿಸಿಎಲ್ ವತಿಯಿಂದ ಜ.29ರ ಬೆಳಿಗ್ಗೆ 7 ಗಂಟೆಯಿಂದ ಜ.31ರ ಸಂಜೆ 6 ಗಂಟೆಯವರೆಗೆ ವಿಜಯಪುರ 110/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2*10ಎಂವಿಎ ಶಕ್ತಿ ಪರಿವರ್ತಕ ಬದಲಾಯಿಸುವ ಕಾಮಗಾರಿ ಕೈಗೊಳ್ಳುವುದರಿಂದ 11ಕೆವ್ಹಿ ಬ್ಯಾಂಕ್ ನಂ.3ಮೇಲೆ ಎಲ್.ಸಿ. ಬೇಕಾಗಿರುವುದರಿಮದ ಸದರಿ 11 ಕೆವ್ಹಿ ಬ್ಯಾಂಕ್ನ ಮೇಲೆ ಬರುವ ಈ-8 ವಾಟರ ಟ್ಯಾಂಕ್, ಈ-9 ಆಕಾಶವಾಣಿ, ಈ-10 ವಿಜಯ ಕಾಲೇಜ್, ಈ-11 ಸಿದ್ದೇಶ್ವರ ಹಾಗೂ ಈ-12 ಮಹಾತ್ಮಾ ಗಾಂಧಿ ಫೀಡರ್ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.