ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಸದಸ್ಯನೋರ್ವ ಅಕಾಲಿಕ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ಕಾರ್ಪೊರೇಟರ್ ವಾರ್ಡ್ ನಂ.29ರ ಸದಸ್ಯರಾದ ವಿಜಯಕುಮಾರ ರಾ. ಬಿರಾದಾರ ನಿನ್ನೆ ತಡರಾತ್ರಿ ಅಕಾಲಿಕ ನಿಧನರಾಗಿದ್ದಾರೆ. ಒಂದು ಬಾರಿ ನಗರಸಭೆ ಸದಸ್ಯರಾಗಿ, ಎರಡು ಬಾರಿ ಮಹಾನಗರ ಪಾಲಿಕೆ ಸದಸ್ಯರಾಗಿ ಜನ ಸೇವೆ ಮಾಡಿದ್ದರು. ಇಂದು ಮಧ್ಯಾಹ್ನ 1 ಗಂಟೆಗೆ ಬೇಗಂ ತಲಾಬ್ ಹತ್ತಿರದ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವರ ಸಂತಾಪ ಸೂಚಿಸಿದ್ದಾರೆ.