ವಿಜಯಪುರ: ರಾಜ್ಯ ವಿಧಾನಸಭಾ ಮತದಾನಕ್ಕೆ ಇಂದು ತೆರೆ ಬಿದ್ದಿದೆ. ಇನ್ನು ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಆದರೆ ಯಾವ ಸರ್ಕಾರ ಅಸ್ತಿತ್ವಕ್ಕೆ ಬರಬಹುದು ಎಂಬ ತೀವ್ರ ಕುತೂಹಲ ಕಾಡುತ್ತಿದೆ. ಇನ್ನೂ ಫಲಿತಾಂಶ ಹೊರ ಬೀಳುವುದಕ್ಕೂ ಮುನ್ನ ವಿಜಯಪುರ ಜಿಲ್ಲೆಯ ಎಕ್ಸಿಟ್ ಪೋಲ್ ವಿವರ ಹೀಗಿದೆ..
ವಿಜಯಪುರ ಜಿಲ್ಲೆಯ ಎಂಟು ಮತಕ್ಷೇತ್ರದಲ್ಲಿ ಬಿಜೆಪಿ 4-3, ಕಾಂಗ್ರೆಸ್ 3-2 ಹಾಗೂ ಜೆಡಿಎಸ್ 2-1 ಬರುವ ನಿರೀಕ್ಷೆ ಇದೆ. ಆದ್ರೇ, ಮತದಾರರ ತೀರ್ಪು ಯಾವ ತರಹ ಬರಬಹುದು ಎಂದು ತಿಳಿಯಲು ಮೇ 13ರ ವರೆಗು ಎಲ್ಲರೂ ಕಾಯಬೇಕಾಗಿದೆ. ಇನ್ನೂ ಕಳೆದ ಬಾರಿ ಬಿಜೆಪಿ 4, ಕಾಂಗ್ರೆಸ್ 3, ಜೆಡಿಎಸ್ 1ರಲ್ಲಿ ಸ್ಥಾನಗಳಿಸಿತ್ತು. ಅದರಲ್ಲೂ ಸಿಂದಗಿ ಉಪ ಚುನಾವಣೆ ಹಿನ್ನೆಲೆ ಜೆಡಿಎಸ್ ಮತಕ್ಷೇತ್ರ ಬಿಜೆಪಿ ಪಾಲಾಗಿತ್ತು.
ವಿಜಯಪುರ ಜಿಲ್ಲೆಯ ಎಕ್ಸಿಟ್ ಪೋಲ್
![ವಿಜಯಪುರ ಜಿಲ್ಲೆಯ ಎಕ್ಸಿಟ್ ಪೋಲ್ ವಿಜಯಪುರ ಜಿಲ್ಲೆಯ ಎಕ್ಸಿಟ್ ಪೋಲ್](https://karnataka1news.com/wp-content/uploads/2023/05/vote-1.jpg)