ವಿಜಯಪುರ: ಜಿಲ್ಲೆಯ ಎಂಟು ಕ್ಷೇತ್ರದಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ಜಯಶಾಲಿ ಆಗಿದೆ. ಇದು ಹಳೆಯ ಮಾತು. ಇದೀಗ್ ಜಿಲ್ಲೆಯಿಂದ ಎಂಟು ಮತಕ್ಷೇತ್ರದಲ್ಲಿ ವಿಜಯಪುರ ನಗರದಿಂದ ಕಾಂಗ್ರೆಸ್ ಟಿಕೆಟ್ಗಾಗಿ ಭಾರಿ ಪೈಪೋಟಿ ನಡೆದಿದೆ. ನಗರದ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಲಿಸ್ಟ್ ದೊಡ್ಡದಾಗಿದೆ. ವಿಜಯಪುರ ನಗರದ ಶಾಸಕ ಹಿಂದೂ ಹುಲಿ ಖ್ಯಾತಿಯ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಸ್ಪರ್ಧೆಗೆ ಬರೋಬ್ಬರಿ 26 ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ. ಮಾಜಿ ಶಾಸಕ ಮಕ್ಬುಲ್ ಬಾಗವಾನ್ ಸೇರಿದಂತೆ 26 ಆಕಾಂಕ್ಷಿಗಳು ಲಿಸ್ಟ್ನಲ್ಲಿ ಇದ್ದಾರೆ. ಇನ್ನು ಸಹೋದರ ಮಕ್ಬುಲ್ ವಿರುದ್ಧ ತಮ್ಮ ಸಹೋದರ ಜಾವೆದ್ ಬಾಗವಾನ್ ಕೂಡಾ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ, ಟಿಕೆಟ್ಗಾಗಿ ಸಹೋದರ, ಸಹೋದರಿಯಲ್ಲಿ ಪೈಪೋಟಿ ನಡೆದಿದ್ದು, ಮತ್ತೊಂದೆಡೆ ಮುಶ್ರಿಫ್ ಫ್ಯಾಮಿಲಿಯಲ್ಲೂ ಟಿಕೆಟ್ ಲಾಬಿ ನಡೆಸುತ್ತಿದ್ದಾರೆ.
ಲಿಸ್ಟ್… ಸೈಯದ್ ಝೈನುಲದ್ದೀನ್, ಸಂಯುಕ್ತ ಪಾಟೀಲ, ಇಕ್ಲಾಸ್ ಸುನ್ನೆವಾಲೆ, ರುಕ್ಸಾನಾ ಉಸ್ತಾದ್, ಅಬ್ದುಲ್ ಹಮ್ಮಿದ್ ಮುಶ್ರಿಫ್, ಮೆಹಬೂಬ್ಸಾಹೇಬ್ ತಾಂಬೋಲಿ, ಸಜ್ಜಾದೇಪೀರಾ ಮುಶ್ರಿಫ್, ಮುಹಮ್ಮದ್ ಶಾಹಿದ್ ಹೊರ್ತಿ, ಮಹಮ್ಮದ್ ರಫೀಕ್ ಟಪಾಲ್, ಮಕ್ಬುಲ್ ಬಾಗವಾನ್, ಹಾಸೀಂಪೀರಾ ವಾಲೀಕಾರ್, ನಜೀರ್ ದುಂಡಿಸಿ, ಸೈಯದ್ ಜಮೀರ್ ಅಹಮದ್ ಭಕ್ಷಿ, ರಫೀಕ್ಅಹ್ಮದ ಖಾನೆ, ಅಬ್ದುಲ್ ರಜಾಕ್ ಹೊರ್ತಿ, ಅಯಾಜ್ಖಾದ್ರಿ ಮುಶ್ರಿಫ್, ಜಾವೆದ್ ಬಾಗವಾನ್, ಸೈಯದ್ ಚಾಂದ್ಪೀರಾ ಇನಾಮದಾರ್, ಅಬ್ದುಲ್ ಕರೀಂ ಬಾಗವಾನ್, ಸಲೀಂ ಉಸ್ತಾದ್, ಹಾಜೀಲಾಲ್ ಬಾಗವಾನ್, ಸೋಹಬ್ ನಂದಿಯಾಲ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದು ಪಕ್ಕಾ ಲಿಸ್ಟ್ ಮಾಹಿತಿ. ಜಸ್ಟ್ ಫೈನಲ್ ಟಿಕೆಟ್ಗಾಗಿ ಮುಂದಿನ ಸಂಚಿಕೆಯಲ್ಲಿ ಬರುತ್ತದೆ..