ವಿಜಯಪುರ: ಕರ್ತವ್ಯ ವೇಳೆ ಬೈಕ್ ಮೇಲಿಟ್ಟ ಪೊಲೀಸ ಟೋಪಿಯನ್ನು ಮದ್ಯ ವ್ಯಸನಿಯೋರ್ವ ತಲೆಗೆ ಹಾಕಿಕೊಂಡಿರುವ ಘಟನೆ ವಿಜಯಪುರ ನಗರದ ಬಸವೇಶ್ವರ ಸರ್ಕಲ್ ಬಳಿ ನಡೆದಿದೆ. ಬಿಸಿಲಿನ ತಾಪಕ್ಕೆ ಪೊಲೀಸ ಸಿಬ್ಬಂದಿಯೋರ್ವ ತನ್ನ ಪೊಲೀಸ ಟೊಪ್ಪಿಯನ್ನು ಬೈಕ್ ಮೇಲಿಟ್ಟಿದ್ದ. ಇದನ್ನು ಮದ್ಯಪ್ರಿಯ ತಲೆ ಹಾಕಿಕೊಂಡು ಓಡಾಟ ಮಾಡಿದ್ದಾನೆ. ಇನ್ನೂ ಪೊಲೀಸ ಟೊಪ್ಪಿ ಹುಡುಕಾಟ ಮಾಡಿದಾಗ ಕುಡುಕ ಹಾಕಿಕೊಂಡಿದ್ದನ್ನು ನೋಡಿ ಟೊಪ್ಪಿ ಕಸಿದುಕೊಂಡಿದ್ದಾನೆ. ಇದೀಗ್ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.