ವಿಜಯಪುರ: ಕಾರು ಕಳ್ಳತನಗೈದು ಅಪರಿಚಿತ ಕಳ್ಳನೋರ್ವ ಟೋಲ್ಗೇಟ್ ಮೂಲಕ ಪರಾರಿಯಾಗಲು ಯತ್ನಿಸಿರುವ ಘಟನೆ ವಿಜಯಪುರ ನಗರದ ಟೋಲ್ಗೇಟ್ ಬಳಿ ರವಿವಾರ ನಡೆದಿದೆ. ಇಳಕಲ್ನಲ್ಲಿ ಅನ್ಸಾರಿ ಎಂಬುವರ KA 01 MC 0973 ನಂಬರಿನ ಕಾರು ಕಳ್ಳತನ ಮಾಡಿದ್ದಾನೆ. ತದನಂತರ ಇಳಕಲ್ನಿಂದ ವಿಜಯಪುರಕ್ಕೆ ಆಗಮಿಸಿದ್ದಾನೆ. ಈ ವೇಳೆ ನಗರದ ಟೋಲ್ಗೇಟ್ನಲ್ಲಿ ಸಿಬ್ಬಂದಿಗಳು ತಪಾಸಣೆ ಮಾಡಿದ್ದಾರೆ. ಈ ವೇಳೆ ಕಳ್ಳನ ಮೇಲೆ ಅನುಮಾನಗೊಂಡ ಸಿಬ್ಬಂದಿಗಳು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ಕಳ್ಳ ಚಾಕು ತೋರಿಸಿ ಹಲ್ಲೆ ಮುಂದಾಗಿದ್ದಾನೆ. ತಕ್ಷಣವೇ ಎಲ್ಲ ಸಿಬ್ಬಂದಿಗಳು ಓಡೋಡಿ ಬಂದಾಗ್ ಕಳ್ಳ ಕಾರು ಬಿಟ್ಟು ಜಮೀನಿನಲ್ಲಿ ಪರಾರಿಯಾಗಿದ್ದಾನೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.