ಬೆಂಗಳೂರು:
ರಾಜ್ಯದಲ್ಲಿ ಈಗಿರುವ ಮಳೆಯ ಅವಾಂತರದ ಬಗ್ಗೆ ಮಾತನಾಡೆದೆ ರಾಜಕೀಯ ಮುಖಂಡರು ನಾನು ಭ್ರಷ್ಟ,ನೀನು ಭ್ರಷ್ಟ ಅವರು ಇಷ್ಟೊಂದು ಆಸ್ತಿ ಮಾಡಿದ್ದಾರೆ,ಇವರು ಇಷ್ಟೊಂದು ಆಸ್ತಿ ಮಾಡಿದ್ದಾರೆ ಎಂದು ತಮ್ಮತಮ್ಮ ಭ್ರಷ್ಟಾಚಾರದ ಬಗ್ಗೆ ತಾವೇ ಹೇಳಿಕೊಳ್ಳುತ್ತಿರುವ ಈ ನಾಯಕರುಗಳಿಗೆ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ.
ಹೌದು ನಿನ್ನೆ ಕಾಂಗ್ರೇಸ್ ಅಧ್ಯಕ್ಷರು,ಉಪಮುಖ್ಯಮಂತ್ರಿ ಡಿ,ಕೆ ಶಿವಕುಮಾರ ಒಬ್ಬ ಭ್ರಷ್ಟಾಚಾರದ ಪಿತಾಮಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ,ವೈ ವಿಜಯಂದ್ರ ಹೇಳಿದರು,ಈಗ ಕಾಂಗ್ರೇಸ್ ನ ಒಬ್ಬಬ ನಾಯಕರು ಪ್ರತಿಉತ್ತರ ಕೊಡಲು ಮುಂದಾಗಿದ್ದಾರೆ ಶಿಕ್ಷಣ ಸಚಿವ ಮದು ಬಂಗಾರಪ್ಪ ಇಂದು ಸುದ್ದಿಗಾರೊಂದಿಗೆ ಮಾತನಾಡಿ ಭ್ರಷ್ಟಾಚಾರದಲ್ಲಿ ಏನಾದರೂ ಅಂಕಗಳು ಕೊಡುವುದಾರೆ ಅದರಲ್ಲಿ ನಂ,1ನೇ ಸ್ಥಾನದಲ್ಲಿ ಬಿ,ವೈ ವಿಜಯಂದ್ರ ಇರತ್ತಿದರು ಎಂದು ವ್ಯಂಗ್ಯವಾಡಿದ್ದಾರೆ. ದೆಹಲಿ ಸಿಎಂ ಕೇಜ್ರಿವಾಲ್ ಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿತ್ತು. ಕೇಜ್ರಿವಾಲ್ ಈಗ ಜೈಲಿನಲ್ಲಿ ಇದ್ದಾರೆ. ಆದರೂ ಒಳ್ಳೆಯ ಆಡಳಿತ ನಡೆಯುತ್ತಿದೆ. ಜೈಲಿಗೆ ಕಳುಹಿಸುವುದು ಅಂದರೆ ಬಿಜೆಪಿಯವರಿಗೆ ಬಹಳ ಖುಷಿ. ವಿಜಯೇಂದ್ರ ಬಗ್ಗೆ ಶಾಸಕ ಯತ್ನಾಳ್ ಹಿಗ್ಗ ಮುಗ್ಗಾ ಬೈಯುತ್ತಿದ್ದಾರೆ. ನಾಯಿ ತರಹ ಬೈಯುತ್ತಿದ್ದಾರೆ. ಅದರ ಬಗ್ಗೆ ನಾಚಿಕೆ ಇಲ್ವಾ? ತಮ್ಮ ವಿರುದ್ಧವೇ ವೀಜಯಂದ್ರ ಪಾದಯಾತ್ರೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಕಿಡಿ ಕಾರಿದರು.