ವಿಜಯಪುರ: ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಅತಾಲಟ್ಟಿ ಗ್ರಾಮದ ಹಿರಿಯರಾದ ಸೋಮವ್ವ ಬಾಳಪ್ಪ ಕೊಟ್ಟಲಗಿ (75) ನಿಧನರಾಗಿದ್ದಾರೆ. ವಯೋ ಸಜಹ ಖಾಯಿಲೆಯಿಂದ ಬಳಲುತ್ತಿದ್ದ ಅವರು ಅತಾಲಟ್ಟಿ ಗ್ರಾಮದ ತಮ್ಮ ನಿವಾಸಲ್ಲಿ ಕೊನೆಯುಸಿರು ಎಳೆದಿದ್ದಾರೆ. ಮೃತರು ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿಲಿದ್ದಾರೆ. ಟಿವಿ9 ಕನ್ನಡ ಸುದ್ದಿ ವಾಹಿನಿಯ ವಿಜಯಪುರ ಜಿಲ್ಲಾ ಛಾಯಾಗ್ರಾಹಕ ಶ್ರೀಶೈಲ ಹಾಗೂ ಬಾಗಲಕೋಟೆ ಜಿಲ್ಲಾ ಛಾಯಾಗ್ರಾಹಕ ಬಾಪು ಸೇರಿದಂತೆ ಮೂವರು ಪುತ್ರರನ್ನು ಅಗಲಿದ್ದಾರೆ. ಸೋಮವ್ವರ ನಿಧನಕ್ಕೆ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಪೀಠದ ಪೀಠಾಧಿಪತಿ ಶ್ರೀ ಪಸನ್ನಾನಂದ ಸ್ವಾಮೀಜಿ, ವಾಲ್ಮೀಕಿ ಸಮಾಜದ ಆಧ್ಯಕ್ಷ ರವಿ ಬಿಸನಾಳ, ಪ್ರಧಾನ ಕಾರ್ಯದರ್ಶಿ ಶಾಸಪ್ಪಾ ಹಂಚಿನಾಳ ಹಾಗೂ ಸಮಾಜದ ಮುಖಂಡರು ಗಣ್ಯರು ಕಂಬನಿ ಮಿಡಿದಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 10 ಗಂಟೆಗೆ ಸ್ವಗ್ರಾಮ ಅತಾಲಟ್ಟಿಯ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.