ವಿಜಯಪುರ: ಬಬಲೇಶ್ವರದಲ್ಲಿ ಮುಂದೆ ನಿಂತು ಪ್ರಮಾಣ ಪತ್ರ ವಿತರಿಸುವ ಪ್ರಯತ್ನ ಮಾಡಿದ್ದೇನೆ. ಇದನ್ನು ಸಹಿಸದ ಕಾಂಗ್ರೆಸ್ಸಿಗರು ವಿನಾಕಾರಣ ಗೊಂದಲ, ಗಲಭೆ ಸೃಷ್ಠಿ ಮಾಡಿದ್ದಾರೆ ಎಂದು
ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಆರೋಪಿಸಿದರು.
ವಿಜಯಪುರದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,
ಸಮಾಜದ ಬಂಧುಗಳು ಮನೆ ಬಾಗಿಲಿಗೆ ಬಂದು ಉದ್ದೇಶ ಪೂರ್ವಕವಾಗಿ ತಡೆ ಹಿಡಿದಿದ್ದಾರೆಂದು ಅಳಲು ತೋಡಿಕೊಂಡಾಗ ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಜಾತಿ ಪ್ರಮಾಣ ಪತ್ರ ಕೊಡಿಸುವ ಪ್ರಯತ್ನ ಮಾಡಿದೆ.
ಇದನ್ನು ಸಹಿಸದೇ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಜಗಳ ಕಾದು ಏಕವಚನದಲ್ಲಿ ಸಂಬೋಧಿಸಿದ್ದು ಸರಿಯಲ್ಲ.
ಇನ್ನು ತಳವಾರ ಮತ್ತು ಪರಿವಾರ ಸಮುದಾಯದ ದಶಕಗಳ ಬೇಡಿಕೆಯಾದ ಎಸ್ ಟಿ ಸೇರ್ಪಡೆ ಮಾಡಿದ್ದು ಕೂಡ ಸಾಮಾಜಿಕ ನ್ಯಾಯದ ಭಾಗ ಎಂದರು.