ವಿಜಯಪುರ: ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಠೋಡಗೆ ಮಾತೃ ವಿಯೋಗ ಆಗಿದೆ. ಪ್ರಕಾಶ್ ರಾಥೋಡ್ ಅವರ ತಾಯಿ ಆಶಾದೇವಿ ರಾಠೋಡ್(85) ವಿಧಿವಶರಾಗಿದ್ದಾರೆ. ಆಶಾದೇವಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣ ಇಂದು ಕೊನೆ ಉಸಿರು ಎಳೆದಿದ್ದಾರೆ. ಆಶಾದೇವಿ ನಗರದ ಉಪ್ಪಲಿ ಬುರ್ಜ್ ಬಳಿ ಇರುವ ನಿವಾಸದಲ್ಲಿ ಆಶಾದೇವಿ ರಾಠೋಡ್ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನದವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ನಂತರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲಿರುವ ಕುಟುಂಬಸ್ಥರು, ನಾಳೆ ಮಧ್ಯಾಹ್ನ 2 ಗಂಟೆಯ ಬಳಿಕ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಸುವುದಾಗಿ ಕುಟುಂಬಸ್ಥರ ಮಾಹಿತಿ ನೀಡಿದ್ದಾರೆ.