ವಿಜಯಪುರ: ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ಅವರು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯ ಮತ್ತು ಉದ್ಯಾನಕ್ಕೆ ಭೇಟಿ ನೀಡಿದರು.
ಮೊಘಲ ಗಾರ್ಡನ್, ಫ್ರೆಂಚ್ ಗಾರ್ಡನ್ ನಲ್ಲಿ ಕೆಬಿಜೆಎನ್ ಎಲ್ ವತಿಯಿಂದ ನಿರ್ಮಿಸಲಾದ ಲೇಸರ್ ಶೋ ಹಾಗೂ ಬಣ್ಣ ಬಣ್ಣದ ನೃತ್ಯ ಕಾರಂಜಿಯನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಎಸಿಗಳು, ಜಿ.ಪಂ. ಸಿಇಓಗಳು ಎಸ್ಪಿಗಳು, ಮಾಜಿ ಶಾಸಕ ಎಸ್.ಕೆ.ಬೆಳ್ಳುಬ್ಬಿ ಸೇರಿದಂತೆ ಇತರೇ ಅಧಿಕಾರ ವರ್ಗದವರು ಉಪಸ್ಥಿತರಿದ್ದರು.