ವಿಜಯಪುರ: ಪ್ರಧಾನಿ ಮೋದಿ ಕ್ಯಾಬಿನೆಟ್ ಸಭೆ ಮಾಡಿ ನಾಲ್ಕು ಕೇಂದ್ರ ಮಂತ್ರಿಗಳನ್ನು ಉಕ್ರೇನ್ ರಷ್ಯಾ ಯುದ್ಧ ಮಾಹಿತಿಗಾಗಿ ಡೆಪ್ಯೂಟ್ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ರಷ್ಯಾ ಉಕ್ರೇನ್ನಲ್ಲಿ ಇಂಡಿಯನ್ಸ್ ಎಂದರೆ ಯಾವುದೇ ತೊಂದ್ರೆ ಆಗ್ತಿಲ್ಲ. ಭಾರತೀಯರು ಎಂದರೇ ನಮ್ಮ ಮಕ್ಕಳಿಗೆ ಎಲ್ಲ ದೇಶಗಳು ಗೌರವ ಕೊಡ್ತಿವೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಪವಾಡ ಆಗಿದೆ. ಆದ್ರೇ, ಪಾಕಿಸ್ತಾನ ಹೆಸ್ರು ಹೇಳಿದ್ರೆ ಅವರನ್ನ ಹೊರಗೆ ಬಿಡ್ತಿಲ್ಲ. ಪಾಕಿಸ್ತಾನದವರು ಭಾರತದ ಹೆಸ್ರು ಹೇಳಿ ಜೀವ ಉಳಿಸಿಕೊಳ್ತಿದ್ದಾರೆ. ಅದಕ್ಕಾಗಿ ಪಾಕ್ ಪರ ಮಾತನಾಡೋರು ಇನ್ನಾದ್ರು ಬುದ್ಧಿ ಕಲಿಯಲಿ ಎಂದರು.
ಇನ್ನು ಮಹಾ ಶಿವರಾತ್ರಿ ಹಿನ್ನಲೆ ವಿಜಯಪುರದ ಪುರಾತನ ಐತಿಹ್ಯವನ್ನು ಹೊಂದಿರುವ ಸುಂದರೇಶ್ವರ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ದೇವಸ್ಥಾನಕ್ಕೆ ಆಗಮಿಸಿ ಶಿವನ ದರ್ಶನ ಪಡೆದುಕೊಂಡರು. ಅಲ್ಲದೇ, ಅಪರೂಪದ ಚಕ್ರಧಾರಿ ಶಿವಲಿಂಗ ದರ್ಶನವನ್ನು ಶಾಸಕ ಯತ್ನಾಳ ಮಾಡಿದರು. ಇನ್ನು ಸುಮಾರು ಒಂದೂವರೆ ಕಿಲೋಮೀಟರ್ ದೂರದವರೆಗೂ ಸರದಿ ಸಾಲಿನಲ್ಲಿ ಭಕ್ತರು
ಸುಂದರೇಶ್ವರ ದೇವಸ್ಥಾನಕ್ಕೆ ನಿಂತತ್ತಿದ್ದಾರೆ.