ವಿಜಯಪುರ: ಟಿಕೆಟ್ ಕಟ್ ಮಾಡುವ ವೇಳೆಯಲ್ಲಿ ಏಕಾಏಕಿ ಡನ್ ಎಂದು ಸೌಂಡ್ ಬಂದಿದ್ದು ಮಾತ್ರ ಗೊತ್ತು ಎಂದು ಬಸ್ ಕಂಡಕ್ಟರ್ ವರದರಾಜ್ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಬಾಬಾನಗರಲ್ಲಿ ಬಸ್, ಲಾರಿ ಅಪಘಾತದಲ್ಲಿ 35ಕ್ಕೂ ಹೆಚ್ಚು ಜನರಿಗೆ ಗಾಯ ಆಗಿದೆ. ಅಪಘಾತದ ಬಳಿಕ ಏನಾಯ್ತು ಎನ್ನುವುದು ತಿಳಿದಿಲ್ಲ. ಅಪಘಾತದಲ್ಲಿ ಯಾರ ತಪ್ಪು ಇದೀಯೋ ಗೊತ್ತಿಲ್ಲ ಎಂದರು. ಇನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇವೆ ಎಂದರು.